ಕೊಪ್ಪಳ ಬಿಜೆಪಿ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಸ್ಪರ್ಧೆ ?

Koppal ಅಚ್ಚರಿ ಬೆಳವಣಿಗೆ ಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿ.ಶ್ರೀರಾಮುಲು ಬಿಜೆಪಿಯಿಂದ ಸ್ಪರ್ಧಿಸುವ ಮಾತುಗಳು ಕೇಳುಬರುತ್ತಿವೆ.

ಹಾಲಿ ಸದಸ್ಯರಿಗೆ ಟಿಕೇಟ್ ಕೊಟ್ಟೇ ಕೊಡುತ್ತಾರೆ ಎನ್ನುವ ಮಾತಿನಂತೆ ಕರಡಿ ಸಂಗಣ್ಣನವರಿಗೆ ಟಿಕೇಟ್ ಗ್ಯಾರಂಟಿ ಎಂದೇ ಹೇಳಲಾಗಿತ್ತು.‌ಪ್ರಸ್ತುತ ಎಂಪಿ ಕರಡಿ ಸಂಗಣ್ಣರಿಗೆ ಟಿಕೇಟ್ ಕೈತಪ್ಪುವ ಸಾಧ್ಯತೆಗಳಿವೆ ಎಂದೇ ಹೇಳಲಾಗಿತ್ತು. ಮೊದಲು ಪ್ರಕಟಿಸಲಾದ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ಸಹ ಅವರ ಹೆಸರಿಲ್ಲ. ಈಗ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕೊಪ್ಪಳದಿಂದ ಇನ್ನೂ ಇಬ್ಬರು ಆಕಾಂಕ್ಷಿಗಳಿದ್ದಾರೆ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಮತ್ತು ಹೊಸ ಮುಖ ಡಾ. ಕೆ.ಬಸವರಾಜ್. ಇವರೂ ಸಹ ಟಿಕೇಟ್ ಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

. ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಅವರೆಲ್ಲರನ್ನೂ ಹೊರತುಪಡಿಸಿ ಈ ಭಾಗದಲ್ಲಿ ಪ್ರಭಾವಿ ನಾಯಕರಾದ ಮೊಣಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸುವ ಸಾಧ್ಯತೆಗಳಿವೆ ಶ್ರೀರಾಮುಲುರವರು.೪ ರಂದು ನಾಮಪತ್ರ ಸಲ್ಲಿಸುವರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕರಡಿ ಸಂಗಣ್ಣರಿಗೆ ಟಿಕೇಟ್ ತಪ್ಪಿದರೆ ಬಂಡಾಯದ ಸಾಧ್ಯತೆ ಇರುವುದರಿಂದ ಬಂಡಾಯ ಶಮನ ಮಾಡಲು ಕೊನೆಯ ಹಂತದಲ್ಲಿ ಅಭ್ಯರ್ಥಿಯನ್ನು ಘೋಷಿಸುವ ಸಾದ್ಯತೆ ಇದೆ.. ಈಗಾಗಲೇ ಮೂರು ದಿನಗಳಿಂದಲೂ ಕೊಪ್ಪಳ ಜಿಲ್ಲಾ ಬಿಜೆಪಿ ನಾಯಕರು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ನಿನ್ನೆ ತಡರಾತ್ರಿ ಘೋಷಿಸಿದ ಪಟ್ಟಿಯಲ್ಲೂ ಸಹ ಕೊಪ್ಪಳ ಅಭ್ಯರ್ಥಿ ಯನ್ನು ಘೋಷಣೆ ಮಾಡದೇ ಇರುವುದು ಈ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.