ಕೊಪ್ಪಳ ಪೋಲಿಸರ ಗಾಂಧಿಗಿರಿ

ಗುಲಾಬಿ ನೀಡಿ ತಿಳಿ ಹೇಳಿದ ಡಿವೈಎಸ್ಪಿ ಉಜ್ಜಿನಕೊಪ್ಪ

ಕೊಪ್ಪಳ : ರಾಜ್ಯ ಸರ್ಕಾರದ ಸೆಮಿಲಾಕ್ಡೌನ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಪೊಲೀಸರು ಸಾರ್ವಜನಿರು ಹೊರಬರದಂತೆ ವಿನೂತನ ಜಾಗೃತಿ ಮೂಲಕ ತಿಳಿಹೇಳುತ್ತಿದ್ದಾರೆ.

ಪೊಲೀಸರ ಲಾಠಿ ಏಟಿಗೆ ವ್ಯಾಪಕ‌ ಟೀಕೆ ವ್ಯಕ್ತವಾದ ಹಿನ್ನೆಲೆ ಕೊಪ್ಪಳ ಪೊಲೀಸರು ಗಾಂಧಿಗಿರಿಗಿಳಿದಿದ್ದಾರೆ.
ಅನಗತ್ಯ ಹೊರ ಬಂದವರಿಗೆ ಗುಲಾಬಿ ನೀಡಿ ಮನವರಿಕೆ ಮಾಡುತ್ತಿದ್ದಾರೆ. ಗಂಗಾವತಿ ಡಿವೈಎಸ್ಪಿ ಆರ್.ಎಸ್. ಉಜ್ಜಿನಕೊಪ್ಪರ  ನೇತೃತ್ವದಲ್ಲಿ ಹೊರ ಬಂದವರಿಗೆ ಗುಲಾಬಿ ನೀಡಿದ ಗಂಗಾವತಿ ಪೊಲೀಸರು ಗಾಂಧಿಗಿರಿಳಿದಿದ್ದಾರೆ. ಡಿವೈಎಸ್ಪಿ ಉಜ್ಜಿನಕೊಪ್ಪ ಅನಗತ್ಯ ಹೊರಗೆ ಬಂದವರಿಗೆ ಗುಲಾಬಿ ನೀಡಿ ತಿಳಿ ಹೇಳಿದದರು. ಲಾಕ್ ಡೌನ್ ಎರಡನೇ ದಿನ ಗಂಗಾವತಿಯಲ್ಲಿ ಬೆಳ್ಳಂಬೆಳಗ್ಗೆ ರಸ್ತೆಗಿಳಿದು ಜಾಗೃತಿ ಮೂಡಿಸುತ್ತಿದ್ದಾರೆ.ವಾಹನ ಸವಾರರಿಗೆ ಎಚ್ಚರಿಕೆ ನೀಡಿ, ಗುಲಾಬಿ ಹೂ ಕೊಟ್ಟು ತಿಳುವಳಿಕೆ ಗಂಗಾವತಿ ನಗರದ ಮಹಾವೀರ ಸರ್ಕಲ್ ಸೇರಿದಂತೆ ಇತರೆಡೆ  ವಾಹನ ಸವಾರರಿಗೆ ಗುಲಾಬಿ ಹೂ ಕೊಟ್ಟರು

ವಾಹನ ಸವಾರರಿಗೆ ಗುಲಾಬಿ ಹೂ ಕೊಟ್ಟು ವಿಶೇಷ ಜಾಗೃತಿ ಮೂಡಿಸಿದರು.

Please follow and like us:
error