ಕೊಪ್ಪಳ ಪೋಲಿಸರಿಗೂ ವಕ್ಕರಿಸಿದ ಕರೋನಾ

ಕೊಪ್ಪಳ: ರಾಜ್ಯದಲ್ಲಿ ದಿನೇ ದಿನೇ ಅಟ್ಟಹಾಸ ಮೆರೆಯುತ್ತಿರುವ ಕಿಲ್ಲರ್ ಕೊರೊನಾ ಕೊಪ್ಪಳದಲ್ಲಿ ಪೊಲೀಸ್ ಗೂ ವಕ್ಕರಿಸಿದೆ. ಕೋವಿಡ್ -19 ಆಸ್ಪತ್ರೆಯಲ್ಲಿ ಡ್ಯೂಟಿ ಮಾಡುತ್ತಿದ್ದ ನಗರ ಠಾಣೆ ಪೇದೆ ಗೆ ಸೋಂಕು ತಗುಲಿದೆ. ಜುಲೈ 1 ರಂದು ಸ್ವಾಬ್ ಟೆಸ್ಟ್ ಕೊಟ್ಟಿದ್ದ ಪೇದೆ, ೨ ರಂದು ಬೆಂಗಳೂರಿಗೆ ತೆರಳಿದ್ದ ಇಂದು ಬೆಳಿಗ್ಗೆ ರಿಜಲ್ಟ್ ಬಂದಿದ್ದು ಕೊರೊನಾ ಇರುವುದು ದೃಢ ಪಟ್ಟಿದೆ. ಇದರಿಂದಾಗಿ ನಗರ ಪೊಲೀಸ್ ಠಾಣೆಯನ್ನ ಸಂಪೂರ್ಣವಾಗಿ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ. ಇಡೀ ನಗರ ಠಾಣೆಯ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಬಹುದು. ಅಷ್ಟೆ ಅಲ್ಲದೆ ಇಂದು ಸುಮಾರು 20 ಕ್ಕು ಹೆಚ್ಚು ಸೋಂಕು ಪ್ರಕರಣ ಪತ್ತೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಪೇದೆ ಕೊಪ್ಪಳದ ಬಿ.ಟಿ.ಪಾಟೀಲ್ ನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು.

Please follow and like us:
error