ಕೊಪ್ಪಳ ತಾಲೂಕ ಲಿಂಗಾಯತರ ಪೂರ್ವಭಾವಿ ಸಭೆ

ಕೊಪ್ಪಳ: ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸಂವಿಧಾನಾತ್ಮಕ ಮಾನ್ಯತೆ ಕುರಿತು ಕೊಪ್ಪಳ ಜಿಲ್ಲೆಯಲ್ಲಿ ಸಮಾವೇಶ ಹಮ್ಮಿಕೊಂಡಿರುವ ಅಂಗವಾಗಿ ಕೊಪ್ಪಳ ತಾಲೂಕ ಲಿಂಗಾಯತರ ಪೂರ್ವಭಾವಿ ಸಭೆಯನ್ನು ದಿನಾಂಕ: 14-10-2017 ಶನಿವಾರ ಸಂಜೆ 4-00 ಗಂಟೆಗೆ ನಗರದ ಕಿನ್ನಾಳ ರಸ್ತೆಯ ಎಪ್.ಸಿ.ಐ. ಗೊದಾಮ ಹತ್ತಿರ ವಿರುವ ಗುರುಬಸವ ಮಹಾಮನೆಯಲ್ಲಿ ಆಯೋಜಿಸಲಾಗಿದೆ.
ಈ ಸಭೆಯಲ್ಲಿ ಕೊಪ್ಪಳ ನಗರ, ತಾಲೂಕಿನ ಎಲ್ಲಾ ಗ್ರಾಮದ ಮುಖಂಡರು, ಸಮಾಜ ಭಾಂದವರು ಭಾಗವಹಿಸಿ ಸಲಹೆ ಸೂಚನೆ ನೀಡಬೇಕೆಂದು ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಮತ್ತು ವಿಶ್ವಗುರು ಬಸವೇಶ್ವರ ಟ್ರಸ್ಟಿನ ಅಧ್ಯಕ್ಷರಾದ ಎಂ.ಬಸವರಾಜಪ್ಪನವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts