ಕೊಪ್ಪಳ ಡಿಸಿ ವರ್ಗಾವಣೆ; ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಕೊಪ್ಪಳ ಡಿಸಿ ವರ್ಗಾವಣೆ; ಸುರಲ್ಕರ್ ವಿಕಾಸ ಕಿಶೋರ್ ಹೊಸ ಡಿಸಿ

-ದಕ್ಷ ಅಧಿಕಾರಿಯ ವರ್ಗಾವಣೆ ಹಿಂದೆ ಕೊಳಕು ರಾಜಕಾರಣ

ಕೊಪ್ಪಳ: ಕೊಪ್ಪಳದ ದಕ್ಷ, ನಿಷ್ಠಾವಂತ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಅವರನ್ನು ಬೆಂಗಳೂರಿನ ಬಿಬಿಎಂಪಿಯ ಆರ್ಥಿಕ ಮತ್ತು ಮಾಹಿತಿ ತಂತ್ರಜ್ಞಾನದ ವಿಶೇಷ ಆಯುಕ್ತರನ್ನಾಗಿ ಸರಕಾರ ವರ್ಗಾವಣೆ ಮಾಡಿದೆ. ಕೊಪ್ಪಳದ ನೂತನ ಜಿಲ್ಲಾಧಿಕಾರಿಯಾಗಿ ಬೆಂಗಳೂರಿನ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಸುರಲ್ಕರ್ ವಿಕಾಸ್ ಕಿಶೋರ್ ಆಗಮಿಸಲಿದ್ದಾರೆ.

ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ವರ್ಗಾವಣೆಯಾಗಿದೆ. ಅಧಿಕಾರಿಗಳ ವರ್ಗಾವಣೆ ಸಹಜ ಪ್ರಕ್ರಿಯೆ ಸರಿ. ಆದರೆ ಕೊರೋನಾದ ಸಂದರ್ಭವನ್ನು ಅತ್ಯುತ್ತಮವಾಗಿ ನಿಭಾಯಿಸುವುದರ ಮೂಲಕ ಕೊಪ್ಪಳ ಜಿಲ್ಲೆಯನ್ನು ಸೇಫ್ ಆಗಿಟ್ಟಿದ್ದ ಇಡೀ ಆಡಳಿತ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದ ಜಿಲ್ಲಾಧಿಕಾರಿ‌ ಇನ್ನಷ್ಟು ದಿನ ಇರಬೇಕಿತ್ತು. ಇಡೀ ಜಿಲ್ಲಾಡಳಿತ ಅವರ ನೇತೃತ್ವದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು.
ಅನಗತ್ಯವಾಗಿರುವ ಯಾರಿಗೂ, ಯಾವುದಕ್ಕೂ ಯೋಚಿಸದೇ, ಜನಪರವಾದ ಸಲಹೆ-ಸೂಚನೆಗಳನ್ನ ಸ್ವೀಕರಿಸಿ, ಸರಕಾರದ ಅನುಮತಿ‌ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದ ಸುನೀಲ್‌ಕುಮಾರ್ ಅವರನ್ನ ಕೊಪ್ಪಳ ಜಿಲ್ಲೆಯ ಜನತೆ ಖಂಡಿತವಾಗಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಎಂಥೆಂಥವರಿಗಾಗಿಯೇ ಬೀದಿಗಿಳಿಯುವ ಜಿಲ್ಲೆಯ ಜನರು ದಕ್ಷ ಅಧಿಕಾರಿಯನ್ನ ವರ್ಗಾವಣೆ ಮಾಡಿರುವ ಕ್ರಮ‌ ವಿರೋಧಿಸಿ ಚಾಟಿ ಬೀಸದೇ ಸುಮ್ಮನೇ ಇರುತ್ತಾರಾ? ಖಂಡಿತವಾಗಿ ಇಲ್ಲ. ಮಂಗಳವಾರ ಡಿಸಿ ವರ್ಗಾವಣೆ ಖಂಡಿಸಿ ಹಲವು ಸಂಘಟನೆಗಳು ಪ್ರತಿಭಟನೆಗೆ‌ ಮುಂದಾಗಿವೆ.

Please follow and like us:
error