ಕೊಪ್ಪಳ ಜಿ.ಪಂ ನೂತನ ಅಧ್ಯಕ್ಷರಾಗಿ ಕೆ.ರಾಜಶೇಖರ ಹಿಟ್ನಾಳ ಮತ್ತೊಮ್ಮೆ ಆಯ್ಕೆ


ಕೊಪ್ಪಳ,: ಕೊಪ್ಪಳ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಗಿಣಿಗೇರಾ ಕ್ಷೇತ್ರದ ಜಿ.ಪಂ. ಸದಸ್ಯ ಕೆ.ರಾಜಶೇಖರ ಹಿಟ್ನಾಳ ಅವರು ಆಯ್ಕೆಯಾದರು.
       ಖಾಲಿ ಇದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷರ ಸ್ಥಾನಕ್ಕೆ ಸೋಮವಾರದಂದು (ಅ.19) ಜಿ.ಪಂ.ನ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ಜರುಗಿತು.
       ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಇಟಗಿ ಕ್ಷೇತ್ರದ ಸದಸ್ಯೆ ಗಂಗಮ್ಮ ಈ. ಗುಳಗಣ್ಣವರಿಂದ ಒಂದು, ಗಿಣಿಗೇರಾ ಕ್ಷೇತ್ರದ ಸದಸ್ಯ ರಾಜಶೇಖರ ಹಿಟ್ನಾಳ್ ಅವರಿಂದ ಎರಡು ನಾಮತ್ರಗಳು ಸಲ್ಲಿಕೆಯಾಗಿದ್ದವು. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಾಸಾದ್ ಅವರು ನಾಮಪತ್ರಗಳನ್ನು ಪರಿಶೀಲಿಸಿ, ನಾಮಪತ್ರಗಳು ಸರಿಯಾಗಿವೆ ಹಾಗೂ ಅಂಗೀಕರಿಸಲ್ಪಟ್ಟಿವೆ ಎಂದರು.  ನಾಮಪತ್ರಗಳನ್ನು ಹಿಂಪಡೆಯಲು ಎರಡು ನಿಮಿಷಗಳ ಕಾಲಾವಧಿ ನಂತರ ಚುನಾವಣೆ ನಡೆಯಿತು.
       ಕೊಪ್ಪಳ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಒಟ್ಟು 29 ಕ್ಷೇತ್ರಗಳ ಸದಸ್ಯರ ಪೈಕಿ ಒಬ್ಬರು ಗೈರಾಗಿದ್ದು, 28 ಸದಸ್ಯರು ಹಾಜರಿದ್ದರು.  ಇಟಗಿ ಕ್ಷೇತ್ರದ ಸದಸ್ಯೆ ಗಂಗಮ್ಮ ಈ. ಗುಳಗಣ್ಣವರ ಪರವಾಗಿ 05 ಮತಗಳು ಮತ್ತು ವಿರುದ್ಧವಾಗಿ 23 ಮತಗಳು ಚಲಾವಣೆಗೊಂಡವು.  ಗಿಣಿಗೇರಾ ಕ್ಷೇತ್ರದ ಸದಸ್ಯ ಕೆ.ರಾಜಶೇಖರ ಹಿಟ್ನಾಳ ಅವರ ಪರವಾಗಿ 23 ಮತಗಳು ಮತ್ತು ವಿರುದ್ಧವಾಗಿ 05 ಮತಗಳು ಚಲಾವಣೆಗೊಂಡವು.  ಈ ಚುನಾವಣೆಯಲ್ಲಿ ಗಿಣಿಗೇರಾ ಕ್ಷೇತ್ರದ ಸದಸ್ಯ ಕೆ.ರಾಜಶೇಖರ ಹಿಟ್ನಾಳ ಅವರು 18 ಮತಗಳ ಅಂತರದಿAದ ಗೆಲುವು ಸಾಧಿಸಿ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಾಸಾದ್ ಅವರು ಘೋಷಿಸಿ, ನೂತನ ಅಧ್ಯಕ್ಷರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹಾಗೂ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.  ಜಿಲ್ಲಾ ಪಂಚಾಯತಿ ಸದಸ್ಯರುಗಳು ನೂತನ ಅಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು.

Please follow and like us:
error