ಕೊಪ್ಪಳ ಜಿಲ್ಲೆ 7 ಸಾವು , 107 ಪಾಜಿಟಿವ್ : 48 ಡಿಸ್ಚಾರ್ಜ

ಕೊಪ್ಪಳ : ಕೊಪ್ಪಳ ಜಿಲ್ಲೆಗೆ ಆಘಾತಕಾರಿ ದಿನ ಇಂದು. ಕರೋನಾ ಮಹಾಮಾರಿಗೆ ಇಂದು ಜಿಲ್ಲೆಯಲ್ಲಿ ೭ ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೪೮ಕ್ಕೆ ಏರಿಕೆಯಾಗಿದೆ. ಇಂದು ೧೦೭ ಪಾಜಿಟಿವ್ ಪ್ರಕರಣಗಳು ವರದಿ ಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ ೨೩೨೯ಕ್ಕೆ ಏರಿಕೆಯಾಗಿದೆ. ೪೮ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ಬಿಡುಗಡೆಯಾದವರ ಸಂಖ್ಯೆ ೧೨೧೮ಕ್ಕೆ ಏರಿಕೆಯಾಗಿದೆ.

ಗಂಗಾವತಿ ತಾಲ್ಲೂಕಿನಲ್ಲಿ ೪೭, ಕೊಪ್ಪಳ ತಾಲ್ಲೂಕಿನಲ್ಲಿ ೩೬, ಕುಷ್ಟಗಿ ತಾಲ್ಲೂಕಿನಲ್ಲಿ ೧೧ ಯಲಬುರ್ಗಾ ತಾಲ್ಲೂಕಿನಲ್ಲಿ ೧೩ ಪ್ರಕರಣಗಳು ವರದಿ.

ಸದ್ಯ ೭೦೮ ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಇನ್ನೂ ೧೯೪೮ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್.ವಿಶಾಲ್ ಕಿಶೋರ್ ಹೇಳಿದ್ದಾರೆ.

Please follow and like us:
error