ಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕಡೌನ್

ಮೇ.17 ರಿಂದ 5 ದಿನಗಳ ಕಾಲ ಕೊಪ್ಪಳ ಜಿಲ್ಲೆ ಸಂಪೂರ್ಣ ಲಾಕ್ ಡೌನ್. ಆರೋಗ್ಯ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತು ಪಡಿಸಿ ಎಲ್ಲವೂ ಸಂಪೂರ್ಣ ಬಂದ್ ಸಚಿವ ಬಿ.ಸಿ ಪಾಟೀಲ್.

ಕೊಪ್ಪಳದಲ್ಲಿ ಸಂಪೂರ್ಣ ಐದು ದಿನ ಸಂಪೂರ್ಣ ಲಾಕ್ ಡೌನ್ ಗೆ ಸಚಿವ ಬಿ ಸಿ ಪಾಟೀಲ್ ಸೂಚನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು
ಮೇ ೧೭ ರಿಂದ ಸಂಪೂರ್ಣ ಜಿಲ್ಲೆಯನ್ನು ಬಂದ ಮಾಡಲಾಗುವುದು
ಅಗತ್ಯ ವಸ್ತುಗಳು ಹೊರತು ಪಡೆಸಿ ಸಂಪೂರ್ಣ ಲಾಕ್ ಡೌನ್. ಎಲ್ಲಾ ಮದುವೆ ಸಮಾರಂಭಗಳಿಗೆ ಮೇ ೩೦ ರವರಗೆ ಬ್ರೇಕ್ ಹಾಕಲಾಗಿದೆ
ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಲಾಗುವುದು
ಗ್ರಾಮೀಣ ಮಟ್ಟದಲ್ಲಿ ಅಲ್ಲಿನ ಜನಪ್ರತಿನಿಧಿಗಳಿಗೆ ಕಟ್ಟುನಿಟ್ಟನ‌ ಕ್ರಮಕ್ಕೆ ಪತ್ರ ಬರೆಯಲಾಗಿದೆ
ಖಾಸಗಿ ಆಸ್ಪತ್ರೆಗಳಿಗೆ ಖಡಕ್ ಸೂಚನೆ ನೀಡಲಾಗಿದೆ.
ಹೋಂ ಐಸೋಲೇಶ್ ಆಗಿರುವವರನ್ನು ಕ್ವಾರಂಟೈನ್ ಮಾಡಲಾಗುವುದು.
ಕೊರೊನಾ ಯಾರನ್ನು ಬಿಡುತ್ತಿಲ್ಲ ಸಾಕಷ್ಟು ಡೇಂಜರ್ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

Please follow and like us:
error