ಕೊಪ್ಪಳ ಜಿಲ್ಲೆ 113 ಪಾಜಿಟಿವ್, ಇಬ್ಬರ ಸಾವು,೪೮ ಡಿಸ್ಚಾರ್ಜ

ಕೊಪ್ಪಳ : ನಿರಂತರ ಟೆಸ್ಟ್ ಗಳ ಸಂಖ್ಯೆ ಹೆಚ್ಚಾಗುತ್ತಲೇ ಕರೋನಾ ಪಾಜಿಟಿವ್ ಪ್ರಕರಣಗಳು ಸಹ ಏರಿಕೆಯಾಗುತ್ತಲೇ ಇವೆ. ಇಂದು ಕೊಪ್ಪಳ ಜಿಲ್ಲೆಯಲ್ಲಿ ೧೧೩ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಗಂಗಾವತಿ ತಾಲ್ಲೂಕಿನಲ್ಲಿ ೪೬, ಕೊಪ್ಪಳ ತಾಲೂಕಿನಲ್ಲಿ ೨೭, ಕುಷ್ಟಗಿ ತಾಲೂಕಿನಲ್ಲಿ ೧೮ ಹಾಗೂ ಯಲಬುರ್ಗಾ ತಾಲೂಕಿನ ಲ್ಲಿ ೨೨ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ೧೮೭೦ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂದು ಇಬ್ಬರು ಸಾವನ್ನಪ್ಪಿದ್ದು ೪೮ ಜನ ಡಿಸ್ಚಾರ್ಜ ಆಗಿದ್ದಾರೆ. ಇದುವರೆಗೆ ೯೯೦ ಜನರನ್ನು ಡಿಸ್ಚಾರ್ಜ ಮಾಡಲಾಗಿದೆ. ಸಾವನ್ನಪ್ಪಿದವರ ಸಂಖ್ಯೆ ೩೬ಕ್ಕೆ ಏರಿಕೆಯಾಗಿದೆ. ೪೩೪ ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್. ವಿಶಾಲ್ ಕಿಶೋರ್ ಹೇಳಿದ್ದಾರೆ.

Please follow and like us:
error