ಕೊಪ್ಪಳ ಜಿಲ್ಲೆ ೧೬೬ ಪಾಜಿಟಿವ್ , ಇಬ್ಬರ ಸಾವು

ಕೊಪ್ಪಳ : ಜಿಲ್ಲೆಯಲ್ಲಿ ಇಂದು ೧೬೬ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೨೬೧೧ ಕ್ಕೆ ಏರಿಕೆಯಾಗಿದೆ. ಮಾಜಿ ಸಚಿವ ಶಿವರಾಜ್ ತಂಗಡಗಿ ಯವರ ಆಪ್ತ ಸಹಾಯಕ ದತ್ತಪ್ಪ ಹಾಗೂ ಇನ್ನೊಬ್ಬರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೫೫ಕ್ಕೆ ಏರಿಕೆಯಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ೯೮, ಕೊಪ್ಪಳ ತಾಲೂಕಿನಲ್ಲಿ ೬೧ , ಕುಷ್ಟಗಿ ತಾಲೂಕಿನಲ್ಲಿ ೭ ಪ್ರಕರಣಗಳು ವರದಿಯಾಗಿವೆ. ಇಂದು ೮೯ ಜನ ಡಿಸ್ಚಾರ್ಜ ಆಗಿದ್ದು ಒಟ್ಟು ೧೩೩೧ ಜನ ಡಿಸ್ಚಾರ್ಜ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೮೪೨ ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ

Please follow and like us:
error