ಕೊಪ್ಪಳ ಜಿಲ್ಲೆ : ೧೩೪ ಪಾಜಿಟಿವ್, ಐವರ ಸಾವು, ೯೨ ಡಿಸ್ಚಾರ್ಜ

ಕನ್ನಡನೆಟ್ ನ್ಯೂಸ್ ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಹಾವಳಿ ಮುಂದುವರೆದಿದೆ. ಇಂದು ೧೩೪ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಕೊಪ್ಪಳ ೩೮, ಗಂಗಾವತಿ ೬೯, ಕುಷ್ಟಗಿ ೨೧, ಯಲಬುರ್ಗಾ ೬ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ೩೯೫೩ ಪಾಜಿಟಿವ್ ಪ್ರಕರಣಗಳು ವರದಿಯಾದಂತಾಗಿವೆ. ಇಂದು ೫ ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಾವನ್ನಪ್ಪಿದವರ ಸಂಖ್ಯೆ ೯೦ ತಲುಪಿದೆ. ಇಂದು ೯೨ ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಈವರೆಗೆ ೨೬೮೩ ಕನ ಡಿಸ್ಚಾರ್ಜ ಆದಂತಾಗಿದೆ. ೮೮೦ ಜನ ಹೋಂ ಐಸೋಲೇಷನ್ ನಲ್ಲಿದ್ದಾರೆ. ೧೦೭೯ ಜನರ ವರದಿ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್ ವಿಕಾಸ್ ಕಿಶೋರ್ ಹೇಳಿದ್ದಾರೆ

Please follow and like us:
error