ಕೊಪ್ಪಳ ಜಿಲ್ಲೆ ಲಾಕಡೌನ್ : ಯಾವುದಕ್ಕೆ ಅನುಮತಿ? ಯಾವುದಕ್ಕಿಲ್ಲ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಕನ್ನಡನೆಟ್ ನ್ಯೂಸ್ : ನಾಳೆಯಿಂದ ಆರಂಭವಾಗಲಿರುವ ಲಾಕಡೌನನಲ್ಲಿ ಏನೆಲ್ಲಾ ಇರುತ್ತೆ ? ಯಾವುದಕ್ಕೆ ವಿನಾಯಿತಿ ಇದೆ ?

ಡಿಸಿ ಆದೇಶ ಇಲ್ಲಿದೆ ನೋಡಿ

ಆದೇಶ File No : MAGICOVID – 19 / 32 / 14 / 2021-22 / Co.No : 53831 ದಿನಾಂಕ : 16-05-2021 ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನಾಧರಿಸಿ , ಕೊಪ್ಪಳ ಜಿಲೆಯಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಅಗತ್ಯ ವಸ್ತುಗಳಾದ ಹಾಲು , ಮೊಟ್ಟೆ , ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್ ಕೃಷಿ ಚಟುವಟಿಕೆಗಳು , ಅಗ್ನಿ ಶಾಮಕ , ಪೆಟ್ರೋಲ್ ಪಂಪ್ , ಆಮ್ಮಜನಕ ಉತ್ಪಾದನಾ ಘಟಕ , ಎಟಿಎಂ ಸೇವೆ , ರೈಸ್‌ಮಿಲ್ ನಲ್ಲಿ ಒಳಗಿನ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರಿಂದ ನಿರ್ವಹಿಸತಕ್ಕದ್ದು ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ , ಉಳಿದ ಎಲ್ಲಾ ಚಟುವಟಿಕೆಗಳನ್ನು ವಿಪತ್ತು ನಿರ್ವಹಣಾ ಕಾಯ್ಕ 2005 ರ ಕಲಂ 34 ( m ) ಮತ್ತು ಅಪರಾಧಿಕಾ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿಯಲ್ಲಿ , ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ : 17-05-2021 ಬೆಳಿಗ್ಗೆ 6-00 ಗಂಟೆಯಿಂದ 21-05-2021 ರಾತ್ರಿ 12.00 ಗಂಟೆವರೆಗೆ ಸಂಪೂರ್ಣವಾಗಿ ನಿರ್ಬಂಧಿಸಿ ಆದೇಶಿಸಲಾಗಿದೆ , ಹಾಗೂ ಅನುಮತಿಸಿದ ಚಟುವಟಿಕೆಗಳನ್ನು ಅನುಬಂಧ -1 ರಲ್ಲಿ ತಿಳಿಸಲಾಗಿದೆ , ಈ ಆದೇಶವನ್ನು ಇಂದು ದಿನಾಂಕ : 16-05-2021 ರಂದು ಆದೇಶ ಹೊರಡಿಸಲಾಗಿದೆ.

Please follow and like us:
error