ಕೊಪ್ಪಳ ಜಿಲ್ಲೆ ಇಂದು 98 ಪಾಜಿಟಿವ್ : ಇಬ್ಬರ ಸಾವು

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ತನ್ನ ಹಾವಳಿಯನ್ನು ಮುಂದುವರೆಸಿದ್ದು ಇಂದು ೯೮ ಪ್ರಕರಣಗಳು ವರದಿಯಾಗಿವೆ. ಇಬ್ಬರು ಸಾವನ್ನಪ್ಪಿದ್ದಾರೆ. ಗಂಗಾವತಿ ತಾಲ್ಲೂಕಿನಲ್ಲಿ ೫೩, ಕೊಪ್ಪಳ ತಾಲೂಕಿನಲ್ಲಿ ೨೭,ಕುಷ್ಟಗಿ ತಾಲೂಕಿನಲ್ಲಿ ೧೭, ಯಲಬುರ್ಗಾ ತಾಲೂಕಿನ ಲ್ಲಿ ೧ ಪ್ರಕರಣ ವರದಿಯಾಗಿವೆ. ಯಲಬುರ್ಗಾ ತಾಲೂಕಿನ ಅಡೂರು ಗ್ರಾಮದ ೬೨ ವರ್ಷದ ಮಹಿಳೆ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಹೊಸಪೇಟೆಯ ೬೩ ವರ್ಷದ ವೃದ್ದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೩೬ ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಟ್ಟು ಸೋಂಕಿತರ ಸಂಖ್ಯೆ ೧೧೯೪ ತಲುಪಿದೆ. ಇದುವರೆಗೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ವರು ೭೫೭ ಇಂದು ೬೮ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ೧೭೫ ಜನ ಹೋಂ ಐಸೋಲೇಷನ್ ಲ್ಲಿದ್ದಾರೆ

Please follow and like us:
error