
ಕೊಪ್ಪಳ:ಜಿಲ್ಲೆಯಲ್ಲಿ ರೈತರು ಮೆಕ್ಕೆಜೋಳ, ಹೈ ಸಜ್ಜೆ ಬೆಳೆಯ ಫಸಲನ್ನು ಉತ್ತಮವಾಗಿ ಬೆಳೆದಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಹಾಗೂ ಸಜ್ಜೆ ದರಗಳು ಕುಸಿತಗೊಂಡಿರುವ ಹಿನ್ನೆಲೆಯಲ್ಲಿ, ರೈತರ ಹಿತದೃಷ್ಟಿಯಿಂದ ತಕ್ಷಣ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುಂತೆ ಕೆಡಿಪಿ ಸದಸ್ಯರು ಹಾಗೂ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಬೂತ್ ಕಮೀಟಿ ಅಧ್ಯಕ್ಷರಾ ಅಮರೇಶ ಕರಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದು, ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳು, ಹಾಗೂ ಕೃಷಿ ಸಂಬಂಧಿತವಾಗಿ ಆಗಬೇಕಾಗಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಿಎಂ ಅವರ ಗಮನಕ್ಕೆ ತರುವ ಮೂಲಕ ರೈತ ಪರ ದ್ವನಿ ಎತ್ತಿದ್ದು, ಇದಕ್ಕೆ ಮುಖ್ಯಮಂತ್ರಿಗಳ ಕಛೇರಿಯಿಂದ ರೈತರ ಹಿತಕಾಪಾಡಲು ಕೊಪ್ಪಳ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಕ್ರಮಕ್ಕೆ ನಿರ್ದಶನಗಳನ್ನು ನೀಡಿರುವರು
ಕೊಪ್ಪಳ ಜಿಲ್ಲೆಯಲ್ಲಿ ಅಧಿಕವಾಗಿ ಮೆಕ್ಕೆಜೋಳ, ಸಜ್ಜೆ ಸೇರಿ ಇತರೆ ಫಸಲಗಳನ್ನು ಬೆಳೆಯಲಾಗುತ್ತದೆ, ಆದರೆಮುಕ್ತ ಮಾರುಕಟ್ಟೆಯಲ್ಲಿ ಮೆಕ್ಕೆ ಜೋಳ ಮತ್ತು ಸಜ್ಜೆ ದರ ಕುಸಿತಗೊಂಡಿದ್ದು, ರೈತರ ಹಿತದೃಷ್ಟಿಯಿಂದ 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮೆಕ್ಕೆ ಜೋಳ ಮತ್ತು ಸಜ್ಜೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುದು ಅವಶ್ಯವಾಗಿರುತ್ತದೆ ಎಂದು ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದ ಪತ್ರದಲ್ಲಿ ಮನವಿ ಮಾಡಿಕೊಳ್ಳಲಾಗಿದೆ.. ಕೃಷಿ ಇಲಾಖೆಯ ಮಾಹಿತಿ ಪ್ರಕಾರ 2020-21 ನೇ ಸಾಲಿನ ಮುಂಗಾರು ಬೆಳೆ ಕ್ಷೇತ್ರ ಮೆಕ್ಕೆ ಜೋಳ 80.169 (ಹೆಕ್ಟರ್) ಇದ್ದು, ನಿರೀಕ್ಷಿತ ಇಳುವರಿ ಪ್ರತಿ ಹೆಕ್ಟರಗೆ 15.50 ಕ್ವಿಂಟಲ್ ಆಗಲಿದೆ, ಒಟ್ಟು ಅಂದಾಜು ಇಳುವರಿ (ಕ್ವಿಂಟಲ್) 12.42619 ಕ್ವಿಂಟಲ್ ಬರಲಿದೆ, ಇನ್ನು 2020-21 ನೇ ಸಾಲಿನ ಮುಂಗಾರು ಬೆಳೆ ಕ್ಷೇತ್ರ ಹೈ-ಸಜ್ಜೆ 48110 (ಹೆಕ್ಟರ್), ನಿರೀಕ್ಷಿತ ಇಳುವರಿ ಪ್ರತಿ ಹೆಕ್ಟರಗೆ 6.20 ಕ್ವಿಂಟಲ್ ಒಟ್ಟು ಅಂದಾಜು ಇಳುವರಿ (ಕ್ವಿಂಟಲ್) 2.98282 ಕ್ವಿಂಟಲ್ ಆಗಲಿದೆ, ಕಳೆದ ವರ್ಷವು ರೈತರು ಅಪಾರ ಪ್ರಮಾಣದಲ್ಲಿ ಮೆಕ್ಕೆಜೋಳವನ್ನು ಬೆಳೆದಿದ್ದರು. ಇದು ರಾಜ್ಯದಲ್ಲಿ ಕೊಪ್ಪಳ ಜಿಲ್ಲೆಯು ಮೆಕ್ಕೆಜೋಳವನ್ನು ಅಧಿಕವಾಗಿ ಬೆಳೆಯಲಾಗುತ್ತದೆ. ಈ ಹಿನ್ನಲೆಯಲ್ಲಿ ರೈತರ ಬೆಲೆಗೆ ಸರ್ಕಾರ ಸೂಕ್ತ ಬೆಂಬಲ ಬೆಲೆಯನ್ನು ಘೋಷಣೆ ಮಾಡುವುಂತೆ ಮನವಿ ಮಾಡಿದೆ ಎಂದು ಅಮರೇಶ ಕರಡಿ ತಿಳಿಸಿದ್ದಾರೆ.