ಕೊಪ್ಪಳ ಜಿಲ್ಲೆಯ ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ

ಗಂಗಾವತಿ :ಹನುಮ ಹುಟ್ಟಿದ್ದು ತಿರುಪತಿಯಲ್ಲಿ ಎಂದು ಟಿಟಿಡಿ ವಿವಾದ ಹುಟ್ಟಿಹಾಕಿದ್ದು, ಇದಕ್ಕೆ ಗಂಗಾವತಿ ಶಾಸಕ ಪರಣ್ಣ ಇತಿಹಾಸಕಾರರು ,ತಜ್ಞರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಹಳಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದರು.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರವೇ ಆನೆಗೊಂದಿಯ ಅಂಜನಾದ್ರಿ ಪರ್ವತ ಹನುಮನ ಜನ್ಮ ಸ್ಥಳ ಎಂದು ಉಲ್ಲೇಖಿಸಿದೆ.ಅನೇಕ ಪುರಾಣಗಳಲ್ಲಿ ಇದು ಸಹ ಉಲ್ಲೇಖವಿದೆ..
ಸಾವಿರಾರು ವರ್ಷಗಳ ರಾಮಾಯಾಣದಲ್ಲಿ ಉಲ್ಲೇಖವಿದ್ದು, ಯಾರೂ ಇದಕ್ಕೆ ಆತಂಕ ಪಡೋ ಅಗತ್ಯ ಇಲ್ಲ..ಯಾರ ಏನೇ ಹೇಳಿದ್ರೂ ಹನುಮ ಹುಟ್ಟಿದ್ದ ಕಿಷ್ಕಿಂಧೆ ಪ್ರದೇಶದಲ್ಲಿ..ಸಾಕಷ್ಟು ಪುರಣಾಗಳು ಹನುಮ ಹುಟ್ಟಿದ್ದ ಸ್ಥಳ ಅಂಜನಾದ್ರಿ ಎಂದು ಹೇಳಿವೆ..ಟಟಿಡಿ ಬಗ್ಗೆ ನಾವು ಜಾಸ್ತಿ ಮಾತಾಡಲ್ಲ..ಅಂಜನಾದ್ರಿ ಹನುಮ ಜನಸಿದ ಸ್ಥಳ ಅನ್ನೋದ ಇಡೀ ಜಗತ್ತಿಗೆ ಗೊತ್ತಿದೆ..
ಹನುಮನ ಸೆಳೆವು,ವಾಲಿ ಕಿಲ್ಲಾ,ತುಂಗಭದ್ರಾ ನದಿಯ ಪುರಾಣದಲ್ಲಿ ಉಲ್ಲೇಖವಿದೆ…
ಟಿಟಿಡಿ ಇದನ್ನು ಕಾಂಟ್ರವರ್ಸಿ ಮಾಡ್ತಿದೆ, ಆದರೆ ಸಮರ್ಪಕ ದಾಖಲೆ ಬಿಡುಗಡೆ ಮಾಡಿಲ್ಲ ಎಂದು ಟಿಟಿಡಿಗೆ ಪ್ರತ್ಯುತ್ತರ ನೀಡಿದರು ಮ
ಶ್ರೀರಾಮ್ ಸರ್ಕ್ಯೂಟ್ ನಲ್ಲಿ ಕಿಷ್ಕಿಂಧೆ ಪ್ರದೇಶವೇ ಹನುಮ ಹುಟ್ಟಿದ್ದು ಅನ್ನೋದನ್ನು ಹೇಳಿದೆ.
ರಾಜ್ಯ ಸರ್ಕಾರ ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಲಿದೆ…ಒಂದು ವಾರದ ನಂತ್ರ ಮುಖ್ಯಮಂತ್ರಿ,ಹಾಗೂ ಮುಜರಾಯಿ ಸಚುವರೊಂದಿಗೆ ನಾನು ಮಾತಾಡ್ತೀನಿ‌.
ಯಾರ ಭಕ್ತರಿಗೂ ಆತಂಕ ಆಗದ ಹಾಗೆ ನಾವು ನೋಡಕೊಳ್ತೀವಿ ಎಂದು ಭರವಸೆ ನೀಡಿದರು

Please follow and like us:
error