ಕೊಪ್ಪಳ ಜಿಲ್ಲೆಯಲ್ಲಿ ೪೦ ಪಾಜಿಟಿವ್, ಇಬ್ಬರ ಸಾವು

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಕರೋನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಇಂದು ಜಿಲ್ಲೆಯಲ್ಲಿ ೪೦ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ೬ ನೂರರ ಗಡಿದಾಟಿರುವ ಸೋಂಕಿತರ ಸಂಖ್ಯೆ ೬೩೯ಕ್ಕೆ ತಲುಪಿದೆ. ಇಂದು ೪೮ ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಇದರೊಂದಿಗೆ ಒಟ್ಟು ಬಿಡುಗಡೆಯಾದವರು ಸಂಖ್ಯೆ 395 ತಲುಪಿದೆ.‌ ೭ ಜನ ಹೋಂ ಐಸೋಲೇಷನಲ್ಲಿದ್ದಾರೆ‌ . ೭೩೨ಜನರ ಟೆಸ್ಟಿಂಗ್ ರಿಜಲ್ಟ್ ಬರುವುದು ಬಾಕಿ ಇದೆ. ಅಲ್ಲದೇ ಇಂದು ಒಂದೇ ದಿನದಲ್ಲಿ ಇಬ್ಬರು ಕೊಪ್ಪಳ ನಗರದ ನಿವಾಸಿಗಳು ಸಾವನ್ನಪ್ಪಿದ್ದಾರೆ. ಇದು ಜನತೆಯಲ್ಲಿ ಆತಂಕ ಹೆಚ್ಚಾಗುವರ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ೧೪ ಜ‌ನ ಸಾವನ್ನಪ್ಪಿದ್ದಾರೆ.

Please follow and like us:
error