fbpx

ಕೊಪ್ಪಳ ಜಿಲ್ಲೆಯಲ್ಲಿ ೧೦೯ ಪಾಜಿಟಿವ್ : 52‌ ಡಿಸ್ಚಾರ್ಜ್

ಕನ್ನಡನೆಟ್ ನ್ಯೂಸ್ ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಹಾವಳಿ ಮುಂದುವರೆದಿದೆ. ಇಂದೂ ಸಹ ೧೦೯. ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1602 ಕ್ಕೆ ಏರಿಕೆಯಾಗಿದೆ. ಇಂದು ೫೨ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು ೮೮೧ ಜನ ಡಿಸ್ಚಾರ್ಜ ಆಗಿದ್ದಾರೆ. ಇವತ್ತು ಕರೋನಾದಿಂದ ಒಬ್ಬರು ಸಾವನ್ನಪ್ಪಿದರೆ ಒಟ್ಟು ಸಾವಿಗೀಡಾದವರು ೩೧. ಗಂಗಾವತಿ ತಾಲ್ಲೂಕಿನಲ್ಲಿ ೬೫, ಕೊಪ್ಪಳ ತಾಲೂಕಿನಲ್ಲಿ 34, ಕುಷ್ಟಗಿಯಲ್ಲಿ ೯, ಯಲಬುರ್ಗಾದಲ್ಲಿ ೧ ಪ್ರಕರಣ ವರದಿಯಾಗಿದೆ. ಇನ್ನೂ ೮೪೨ ಜನರ ಟೆಸ್ಟ್ ರಿಜಲ್ಟ್ ಬರುವುದು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಎಸ್ ವಿಶಾಲ್ ಕಿಶೋರ್ ಹೇಳಿದ್ದಾರೆ.

Please follow and like us:
error
error: Content is protected !!