ಕೊಪ್ಪಳ ಜಿಲ್ಲೆಯಲ್ಲಿ ಮತ್ತೆರೆಡು ಪಾಜಿಟಿವ್ ಕೇಸ್ ?

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಇಂದು ಮತ್ತೆ ಪಾಜಿಟಿವ್ ಕೇಸ್ ಗಳು ದೃಡವಾಗುವ ಸಂಭವವಿದೆ ಎನ್ನಲಾಗಿದೆ. ಗಂಗಾವತಿ ಹಾಗೂ ಕಾರಟಗಿಯಲ್ಲಿ ತಲಾ ಒಂದು ಪಾಜಿಟಿವ್ ಪ್ರಕರಣ ವರದಿಯಾಗುವ ಸಾದ್ಯತೆಯಿದೆ !  ಮಹಿಳೆ  ಮತ್ತು ಯುವಕನಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.  ಆದರೆ ಅಧಿಕೃತವಾಗಿ ಇದನ್ನು ಜಿಲ್ಲಾಧಿಕಾರಿಯವರು ದೃಡಪಡಿಸಿಲ್ಲ. ಆದರೆ ಗಂಗಾವತಿಯ  ಬಡಾವಣೆಯೊಂದರಲ್ಲಿ ಈಗಾಗಲೇ ಸೀಲ್ ಡೌನ್ ಪ್ರಕ್ರಿಯೆ ಆರಂಭಿಸಲಾಗಿದೆ. ಇದು ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇಷ್ಟು ದಿನ ಯಾವುದೇ ಪಾಜಿಟಿವ್ ಪ್ರಕರಣಗಳಿಲ್ಲದೇ ನೆಮ್ಮದಿಯಿಂದ ಇದ್ದ ಗಂಗಾವತಿ ನಗರದ ಜನತೆ ಆತಂಕಪಡುವಂತಾಗಿದೆ. ಇದರ ಬಗ್ಗೆ ಅಧಿಕೃತವಾಗಿ ಜಿಲ್ಲಾಧಿಕಾರಿಗಳು ಇನ್ನೂ ಮಾಹಿತಿ ನೀಡಬೇಕಿದೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವಿದೆ. ಈಗಾಗಲೇ ಕೊಪ್ಪಳ ಜಿಲ್ಲೆಯಲ್ಲಿ ೬ ಪಾಜಿಟಿವ್ ಪ್ರಕರಗಳು ವರದಿಯಾಗಿದ್ದು ನಾಲ್ವರು ಗುಣಮುಖರಾಗಿದ್ದಾರೆ. ಇನ್ನೂ ಇಬ್ಬರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

Please follow and like us:
error