ಕೊಪ್ಪಳ ಜಿಲ್ಲೆಯಲ್ಲಿ ಇಂದು ಮತ್ತೆ ೧೪ ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಇಂದು ಜಿಲ್ಲೆಯಲ್ಲಿ ಕರೋನಾ ಮತ್ತೆ ತನ್ನ ಅಟ್ಟಹಾಸ ಮುಂದುವರೆಸಿದೆ. ಜಿಲ್ಲೆಯಲ್ಲಿ ಒಟ್ಟು ೧೪ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊಪ್ಪಳ, ಗಂಗಾವತಿ, ಯಲಬುರ್ಗಾ, ಕುಷ್ಟಗಿ ತಾಲೂಕಿನಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ.

ಕುಷ್ಟಗಿ ತಾಲೂಕಿನ ತಾವರಗೇರಾದ ನಾಲ್ವರು ಆರೋಗ್ಯ ಸಿಬ್ಬಂದಿಗಳಿಗೂ ಸೋಂಕು ಹರಡಿದೆ. ಕುಷ್ಟಗಿ ತಾಲ್ಲೂಕಿನ ಲ್ಲಿ ೬, ಕೊಪ್ಪಳ ತಾಲ್ಲೂಕಿನಲ್ಲಿ ೫, ಯಲಬುರ್ಗಾ ತಾಲೂಕಿನ ಲ್ಲಿ ೨ ಮತ್ತು ಗಂಗಾವತಿ ಯಲ್ಲಿ ಒಂದು ಪ್ರಕರಣ ಪತ್ತೆಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ೮೦ ಪಾಜಿಟಿವ್ ಪ್ರಕರಣಗಳು ಪತ್ತೆ, ಒಬ್ಬ ರೋಗಿಯ ಸಾವು ಹಾಗೂ ಇದುವರೆಗೆ ೧೮ ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ

Please follow and like us:
error