ಕೊಪ್ಪಳ ಜಿಲ್ಲೆಯಲ್ಲಿ ಇಂದು ಮತ್ತೆ ೮ ಪಾಜಿಟಿವ್ ಪ್ರಕರಣಗಳು

ಕನ್ನಡನೆಟ್ ನ್ಯೂಸ್ : ಕೊಪ್ಪಳ ಜಿಲ್ಲೆಯಲ್ಲಿ
ಇಂದು ಮತ್ತೆ ೮ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಕರೋನಾ ವಕ್ಕರಿಸಿದೆ. ಗಂಗಾವತಿ ತಾಲೂಕಿನ ಲ್ಲಿ ೩, ಕುಷ್ಟಗಿ ತಾಲೂಕಿನಲ್ಲಿ ೩, ಯಲಬುರ್ಗಾದಲ್ಲಿ ೧, ಕಂಪ್ಲಿ ೧ ಪ್ರಕರಣ ಬಂದಿವೆ.೫ ಪುರುಷರು ಮೂವರು ಮಹಿಳೆಯರಿಗೆ ಪಾಜಿಟಿವ್ ವರದಿಯಾಗಿವೆ. ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್ ವಿಶಾಲ್ ಕಿಶೋರ್ ಮಾಹಿತಿ ನೀಡಿದ್ದಾರೆ . ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ೧೩೯ ಪಾಜಿಟಿವ್ ಪ್ರಕರಣಗಳು. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಕರೋನಾ ಪಾಜಿಟಿವ್ ಬರುತ್ತಿರುವುದು ಜನತೆಯಲ್ಲಿ ಆತಂಕ ಮೂಡಿಸಿದೆ.

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಪತ್ತೆ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಸೋಮವಾರ 8 ಕೊರೊನಾ ಹೊಸ ಕೇಸ್‌ಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ 139 ಕೊರೊನಾ ಪ್ರಕರಣಗಳು ದಾಖಲಾಗಿವೆ.

ಹೊಸಪೇಟೆ ತಾಲೂಕಿನ ಕಂಪ್ಲಿಯ 27 ವರ್ಷದ ಜುಲೈ 3ರಂದು ಬೆಂಗಳೂರಿನಿಂದ ಬಂದಿದ್ದು, ರೋಗದ ಗುಣಲಕ್ಷಣಗಳು ಕಾಣಿಸಿಕೊಂಡಿದ್ದು ಕೊರೊನಾ ಸೋಂಕು ದೃಢಪಟ್ಟಿದೆ.

ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದ 24 ವರ್ಷದ ಮಹಿಳೆ ಮಧ್ಯ ಪ್ರದೇಶದಿಂದ ಜೂನ್ 26ರಂದು ಆಗಮಿಸಿದ್ದು, ರೋಗದ ಗುಣಲಕ್ಷಣಗಳು ಇರದಿದ್ದರೂ ಕೋವಿಡ್-19 ಪಾಸಿಟಿವ್ ಬಂದಿದೆ. ಕುಷ್ಟಗಿ ತಾಲೂಕಿನ ಪುರ ಗ್ರಾಮದ 10 ವರ್ಷದ ಬಾಲಕ ಹಾಗೂ 54 ವರ್ಷದ ವ್ಯಕ್ತಿಗೆ ರೋಗದ ಗುಣಲಕ್ಷಣಗಳು ಇರದಿದ್ದರೂ ಕೋವಿಡ್-19 ದೃಢಪಟ್ಟಿದೆ. ಇವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ

ಗಂಗಾವತಿ ತಾಲೂಕಿನ ತೊಂಡಿಹಾಳ ಕ್ಯಾಂಪ್‌ನ 41 ವರ್ಷದ ವ್ಯಕ್ತಿಗೆ ರೋಗದ ಗುಣಲಕ್ಷಣಗಳು ಇರದಿದ್ದರೂ ಕೋವಿಡ್-19 ಸೋಂಕು ಪತ್ತೆಯಾಗಿದೆ. ಗಂಗಾವತಿ‌ ನಗರದ 70 ಮತ್ತು 28 ವರ್ಷದ ಮಹಿಳೆಯರಿಬ್ಬರಿಗೆ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು ಕೊರೊನಾ ದೃಢಪಟ್ಟಿದೆ. ಇವರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ.

ಕುಷ್ಟಗಿ ತಾಲೂಕಿನ ನವಲಹಳ್ಳಿಯ 23 ವರ್ಷದ ಯುವಕ ಜುಲೈ 1ರಂದು ತುಮಕೂರಿನಿಂದ ಆಗಮಿಸಿದ್ದು ರೋಗದ ಗುಣಲಕ್ಷಣಗಳು ಕಾಣಿಸಿಕೊಂಡು ಪರೀಕ್ಷೆಗೊಳಪಡಿಸಿದಾಗ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

ಇಂದು ಪತ್ತೆಯಾಗಿರುವ 8 ಕೊರೊನಾ ಕೇಸ್‌ಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ತಿಳಿಸಿದ್ದಾರೆ.

Please follow and like us:
error