ಕೊಪ್ಪಳ ಜಿಲ್ಲೆಯಲ್ಲಿಂದು 88 ಪಾಜಿಟಿವ್ : ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ 967 ಕ್ಕೆ ಏರಿಕೆ

ಯಲ್ಲಿ ಇಂದೂ ಸಹ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಲ್ಲಿದೆ. ಇಂದು 88 ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ಗಂಗಾವತಿಯಲ್ಲಿ 59, ಕೊಪ್ಪಳ ತಾಲೂಕಿನಲ್ಲಿ 25, ಕುಷ್ಟಗಿ ತಾಲೂಕಿನಲ್ಲಿ 3, ಯಲಬುರ್ಗಾ ತಾಲೂಕಿನಲ್ಲಿ 1 ಪ್ರಕರಣ ವರದಿಯಾಗಿವೆ. ಇದರೊಂದಿಗೆ ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ವರದಿಯಾದ ಪ್ರಕರಣಗಳ ಸಂಖ್ಯೆ 967ಕ್ಕೇ ಏರಿಕೆಯಾಗಿದೆ.

ತಾಲೂಕವಾರು ನೋಡುವುದಾದರೆ ಗಂಗಾವತಿ : 538, ಕೊಪ್ಪಳ ತಾಲೂಕಿನಲ್ಲಿ :230, ಕುಷ್ಟಗಿ : 108, ಯಲಬುರ್ಗಾದಲ್ಲಿ 19 ಪ್ರಕರಣಗಳು ಒಟ್ಟು 967 ಪ್ರಕರಣಗಳು ವರದಿಯಾಗಿವೆ. 594ಜನ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 171 ಜನ ಕೋವಿಡ್ ಸೆಂಟರ್ ಗಳಲ್ಲಿದ್ದಾರೆ. 20 ಜನ ಸಾವನ್ನಪ್ಪಿದ್ದಾರೆ. 116 ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ. ಇನ್ನೂ 66 ಜನರನ್ನು ಶಿಪ್ಟ್ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ವಿಶಾಲ್ ಕಿಶೋರ್ ತಿಳಿಸಿದ್ದಾರೆ.

Please follow and like us:
error