ಕೊಪ್ಪಳ ಜಿಲ್ಲೆಗೆ ತಟ್ಟಿತಾ ಜಿಂದಾಲ್ ಸೊಂಕು?

ಕೊಪ್ಪಳ : ಕೊಪ್ಪಳ ಜಿಲ್ಲೆಗೆ ತಟ್ಟಿತಾ ಜಿಂದಾಲ್ ಸೋಂಕು? ಇದರ ಬಗ್ಗೆ ಸಾಕಷ್ಟು ಅನುಮಾನಗಳು ಕಾಡುತ್ತಿವೆ. ಹೀಗಾಗಲೇ ಜಿಂದಾಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿ ಸೋಂಕು ಹರಡುತ್ತಿರುವ ಹಿನ್ನೆಲೆ ಅಕ್ಕಪಕ್ಕದ ಗಡಿ ಜಿಲ್ಲೆಗಳಲ್ಲಿ ಆತಂಕ ಶುರುವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಜಿಂದಾಲ್ ಫ್ಯಾಕ್ಟರಿ ಕಾರ್ಮಿಕರು ಇದ್ದಾರೆ. ಇವರಿಂದ ಹರಡುವ ಸಾದ್ಯತೆ ದಟ್ಟವಾಗುತ್ತಿದೆ.

ಕೊಪ್ಪಳದಲ್ಲಿಂದು ಸುಮಾರು 4 ಕೋವಿಡ್ 19 ಸೋಂಕು ದೃಢವಾಗುತ್ತವೆ ? ಎನ್ನಲಾಗುತ್ತಿದೆ.ಗಂಗಾವತಿ ತಾಲೂಕಿನ 2, ಕುಕನೂರಿನ 1 ಸೇರಿ ಒಟ್ಟು 4 ಜನ್ರಿಗೆ ಸೋಂಕು ಪತ್ತೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಜಿಂದಾಲ್ ನಲ್ಲಿ ಕೆಲಸ ಮಾಡ್ತಿರೋ ಮಕ್ಕಳಿಂದ ವೃದ್ಧ ದಂಪತಿಗಳಿಗೆ ಸೊಂಕು ತಗಲಿದೆ ಎನ್ನಲಾಗುತ್ತಿದೆ.ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಮಕ್ಕಳು ಸೋಂಕು ತಗುಲಿಸಿರಬಹುದು ಎನ್ನಲಾಗುತ್ತಿದೆ. ಅಲ್ಲದೇ ಹೊಸಳ್ಳಿಗೆ ಬೇಟಿ ನೀಡಿದ್ದ ವೈದ್ಯರಿಗೆ ಹೊಸಪೇಟೆ ಯಲ್ಲಿ ಪಾಜಿಟಿವ್ ಕನ್ಪರ್ಮ ಆಗಿರುವ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಆತಂಕ ಶುರುವಾಗಿದೆ.

ಕುಕನೂರು ತಾಲೂಕಿನ ಬಳಿಗೇರಿಯ ವ್ಯಕ್ತಿಗೂ ಸೋಂಕು ದೃಢವಾಗಿದೆ ಎನ್ನುವ ಮಾಹಿತಿಯಿದೆ.

Please follow and like us:
error