ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿ ಪದಾಧಿಕಾರಿಗಳಿಗೆ ಸನ್ಮಾನ

ಕೊಪ್ಪಳ : ರಾಜ್ಯ ವಕ್ಫ್ ಮಂಡಳಿಯ ಕಾನೂನು ಸಮಿತಿಯ ಅಧ್ಯಕ್ಷರಾದ ಆಸೀಫ್ ಅಲಿ ರವರ ನೇತೃತ್ವದಲ್ಲಿ ಕೊಪ್ಪಳ ನಗರದ ಯೂಸೂಫಿಯಾ ಮಸೀದಿಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ, ಹೊಸದಾಗಿ ಆಯ್ಕೆಯಾದ ಕೊಪ್ಪಳ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಆದೇಶ ಪ್ರತಿಯನ್ನು ನೀಡಲಾಯಿತು.

ನಂತರ ಮಾತನಾಡಿದ ಆಸೀಫ್ ಅಲಿ ಯವರು ವಕ್ಫ ಆಸ್ತಿ ರಕ್ಷಣೆ ಹಾಗೂ ಅಭಿವೃದ್ಧಿ ಕುರಿತು ವಿಶೇಷ ವಿವರಣೆಯನ್ನು ನೀಡಿದರು.

ಈ ಸಂದರ್ಭದಲ್ಲಿ ವಕ್ಫ್ ಬೋರ್ಡಿನ ಅಧ್ಯಕ್ಷರು ನೂತನ ಉಪಾಧ್ಯಕ್ಷರು, ಸದಸ್ಯರು, ಧಾರ್ಮಿಕ ಗುರುಗಳು, ನಗರದ ಮುಖಂಡರು ಹಾಗೂ ಇತರರು ಹಾಜರಿದ್ದರು.

ಸಲೀಂ ಮಂಡಲಗೇರಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Please follow and like us:
error