ಕೊಪ್ಪಳ : ಕರೋನಾಕ್ಕೆ ಮತ್ತೆರೆಡು ಸಾವು ಸಂಭವಿಸಿವೆ.ಜಿಲ್ಲೆಯಲ್ಲಿ ಸಾವಿನ ಸರಣಿ ಮುಂದುವರೆದಿದೆ. ಮುನಿರಾಬಾದಿನ ೫೨ ವರ್ಷದ ಮಹಿಳೆ ಸಾವನ್ನಪ್ಪಿದವರು ಟೆಸ್ಟ್ ನಲ್ಲಿ ಕರೋನಾ ಪಾಜಿಟಿವ್ ಕನ್ಪರ್ಮ ಅಗಿದೆ.
ಗಂಗಾವತಿ ತಾಲೂಕಿನ ಸಿದ್ದಾ ಪುರದ ೬೦ ವರ್ಷದ ವೃದ್ದೆ ಸಕ್ಕರೆ ಕಾಯಿಲೆ, ಹೈಪರ್ ಟೆನ್ಷನ್ ನಿಂದ ಬಳಲುತ್ತಿದ್ದರುಉಸಿರಾಟದ ತೊಂದರೆಯ ಕಾರಣಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಯಿತು.ಆಸ್ಪತ್ರೆಗೆ ಬಂದ ೩೦ ನಿಮಿಷಗಳಲ್ಲಿ ಸಾವನ್ನಪ್ಪಿದ್ದಾರೆ.ರ್ಯಾಪಿಡ್ ಟೆಸ್ಟ್ ನಲ್ಲಿ ಪಾಜಿಟಿವ್ ಕನ್ಪರ್ಮ ಆಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ೧೨ ಕ್ಕೆ ಏರಿಕೆಯಾಗಿದೆ.

Please follow and like us: