ಕೊಪ್ಪಳ ಒಂದೇ ದಿನದಲ್ಲಿ ೨೩ ಪ್ರಕರಣಗಳು : ಒಟ್ಟು 80 ಡಿಸ್ಚಾರ್ಜ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಒಂದೇ ದಿನ ೨೨ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.‌ ಇದರಿಂದ ಕರೋನಾ ಸಮುದಾಯಕ್ಕೆ ಹರಡಿರುವ ಶಂಕೆ ವ್ಯಕ್ತವಾಗುತ್ತಿದೆ. ಕೊಪ್ಪಳ ತಾಲೂಕಿನಲ್ಲಿ ೧ ಕುಷ್ಟಗಿ ತಾಲೂಕಿನಲ್ಲಿರುವ ಎರಡು ಪ್ರಕರಣಗಳು. ಗಂಗಾವತಿ ತಾಲೂಕಿನಲ್ಲಿ ೧೭, ಯಲಬುರ್ಗಾದಲ್ಲಿ ೨ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಪಾಜಿಟಿವ್ ಪ್ರಕರಣಗಳ ಸಂಖ್ಯೆ ೧೩೧ ತಲುಪಿದೆ. ಗುಣಮುಖರಾಗಿ ಬಿಡುಗಡೆಯಾದ ವರು ೮೦ ಜನ ಎನ್ನವುದು ಸಮಾಧಾನಕರ ಸಂಗತಿ. ಇದುವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ. ಹೆಚ್ಚಾಗುತ್ತಿರುವ ಪಾಜಿಟಿವ್ ಪ್ರಕರಣಗಳಿಂದಾಗಿ ಜನತೆ ಆತಂಕದಲ್ಲಿದ್ದಾರೆ. ಇಂದಿನ ಲಾಕಡೌನ್ ಸಂಪೂರ್ಣ ಯಶಸ್ವಿಯಾಗಿದ್ದು ಜನರು ಸ್ವಯಂಪ್ರೇರಿತ ರಾಗಿ ಬೆಂಬಲಿಸಿದ್ದಾರೆ

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್-19 ಹೊಸ ದಾಖಲೆ ಬರೆದಿದೆ. ಇದುವರೆಗೂ ಒಂದೇ ದಿನ 22 ಕೇಸ್ ದೃಢಗೊಂಡದ್ದು ದಾಖಲೆಯಾಗಿತ್ತು. ರವಿವಾರ ಒಂದೇ ದಿನ 23 ಹೊಸ ಕೊರೊನಾ ಕೇಸ್‌ಗಳು ದೃಢವಾಗುವ ಮೂಲಕ ಹೊಸ ದಾಖಲೆ ಬರೆದಂತಾಗಿದೆ.

ಹಾಗೆಯೇ 12 ಜನ ಸೋಂಕಿನಿಂದ ಮುಕ್ತರಾಗಿ ಗುಣಮುಖರಾಗಿದ್ದಾರೆ. ರವಿವಾರ ಕೊರೊನಾದ ಕೊಪ್ಪಳ ಜಿಲ್ಲೆಯ ಸ್ಟೇಟಸ್ ಕೊಂಚ ಕಹಿಯಾದರೂ ತಕ್ಕಮಟ್ಟಿಗೆ ಸಿಹಿ ಸುದ್ದಿ ನೀಡಿದಂತಾಗಿದೆ.

ಸೋಂಕಿತರಾಗಿ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದ 12 ಜನರನ್ನು ಇಂದು ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. KPL-37-P-9811, KPL-40-P-9814, KPL-44-P-9818, KPL-64-P-10681, KPL-65-P-10682, KPL-85-P-16481, KPL-87-P-16420, KPL-94-P-16427, KPL-100-P-16846, BLR-P-15511, BLR-P-15514, BLR-P-15517 ಇವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 131 ಪಾಜಿಟಿವ್ ಪ್ರಕರಣಗಳು ದಾಖಲಾಗಿದ್ದು, 81 ಜನ ಗುಣಮುಖರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು, 48 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೂ ಗಂಗಾವತಿ ಎಂಸಿಎಚ್ ಆಸ್ಪತ್ರೆಯಲ್ಲಿ (ಕೋವಿಡ್-19) ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, 7 ಜನ ಗುಣಮುಖರಾಗಿದ್ದಾರೆ. ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಪ್ರಕರಣಗಳು ಗಂಗಾವತಿ ಕೋವಿಡ್-19 ಆಸ್ಪತ್ರೆಯಲ್ಲಿ ಇಲ್ಲ.

ಕೊಪ್ಪಳದ ಜಿಲ್ಲಾಸ್ಪತ್ರೆ (ಕೋವಿಡ್-19) ಯಲ್ಲಿ 123 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, 74 ಜನ ಸೋಂಕುಮುಕ್ತರಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದು 47 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ರಾಜ್ಯ ಹೆಲ್ತ ಬುಲೆಟಿನ್ ನಲ್ಲಿ ೨೨ ಎಂದು ದಾಖಲಿಸಲಾಗಿದೆ

Please follow and like us:
error