ಕೊಪ್ಪಳ ಇಂದು ಮತ್ತೆ ೮ ಪ್ರಕರಣಗಳು : ವೈದ್ಯಕೀಯ ಸಿಬ್ಬಂದಿ, ಮಹಿಳಾ ಪೋಲಿಸ್ ಪೇದೆಗೂ ತಗುಲಿದ ಕರೋನಾ

Koppal ಇಂದು ಜಿಲ್ಲೆಯಲ್ಲಿ ಮತ್ತೆ ೮ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಕೊಪ್ಪಳ ತಾಲೂಕಿನಲ್ಲಿಯೇ ೭ ಪ್ರಕರಣಗಳು ಪತ್ತೆಯಾಗಿದ್ದು ಜನತೆಯಲ್ಲಿ ಆತಂಕ‌ ಹೆಚ್ಚಿಸಿದೆ.ಗಂಗಾವತಿ ತಾಲ್ಲೂಕಿನಲ್ಲಿ ೧ ಪ್ರಕರಣ ಪತ್ತೆಯಾಗಿದೆ.ಇಬ್ಬರು ವೈದ್ಯಕೀಯ ಸಿಬ್ಬಂದಿ, ಮಹಿಳಾ ಪೋಲಿಸ್ ಪೇದೆಗೂ ಕರೋನಾ ತಗುಲಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ೧೫೭ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಕೊಪ್ಪಳ ನಗರದಲ್ಲಿ ೪ ಪ್ರಕರಣಗಳು, ಹಿಟ್ನಾಳ, ಮುನಿರಾಬಾದ್, ಹೊಸಗೊಂಡಬಾಳದಲ್ಲಿ ತಲಾ ಒಂದು ಪ್ರಕರಣ ಬಂದಿವೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಂಗಾವತಿ, ಕುಷ್ಟಗಿ, ಕೊಪ್ಪಳದಲ್ಲಿ ಸ್ವಯಂಪ್ರೇರಿತ ಲಾಕಡೌನ್ ಆರಂಭವಾಗಿದೆ. ಕೊಪ್ಪಳದ ಆಯುರ್ವೇದಿಕ್ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.

Total cases 157
Total discharged 87
Total deaths 2
Total active 67
(1 case of Donnegudda admitted in BBMP)

Please follow and like us:
error