ಜಂಗ್ಲಿ ಗ್ರಾಮವನ್ನು ಸೀಲ್ ಡೌನ್ ಮಾಡಿಸಿದ ತಹಶಿಲ್ದಾರ್

ಕೊಪ್ಪಳ : ಒಂದು ವರ್ಷದಿಂದ ಲಿವರ್ ಸಮಸ್ಯೆ ಸೇರಿದಂತೆ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಸಾವನ್ನಪ್ಪಿದ ಘಟನೆ ನಡೆದಿದೆ.. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಜಂಗ್ಲಿ ಗ್ರಾಮದ 35 ವರ್ಷದ ವ್ಯಕ್ತಿಯೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಇನ್ನೂ ಎರಡು ದಿನಗಳ ಹಿಂದೆ ಆ ವ್ಯಕ್ತಿಗೆ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ಇದ್ರಿಂದ ಆತನ ಕುಟುಂಬಸ್ಥರು ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಿದ್ರು.. ಆದ್ರೆ ಚಿಕಿತ್ಸೆ ಫಲಿಸದೇ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸಾವನ್ನಪ್ಪುವ ಮುನ್ನಾ ಆಸ್ಪತ್ರೆಯ ಸಿಬ್ಬಂದಿಗಳು ವ್ಯಕ್ತಿಯ ಸ್ವ್ಯಾಬ್ ಪಡೆದು ಟೆಸ್ಟ್ ಗೆ ಕಳುಹಿಸಿತ್ತು. ಇದೀಗ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದ್ದು, ಇದ್ರಿಂದ ಗ್ರಾಮದಲ್ಲಿ ಆತಂಕದ ಛಾಯೆ ಮನೆಮಾಡಿದ್ದು, ಜಂಗ್ಲಿ ಗ್ರಾಮವನ್ನೆ ತಹಶಿಲ್ದಾರ ಎಲ್.ಡಿ ಚಂದ್ರಕಾಂತ ಸೀಲ್ ಡೌನ್ ಮಾಡಿಸಿದ್ರು.ಇದೇ ವೇಳೆ ಪಿಎಸ್ಐ ದೊಡ್ಡಪ್ಪ, ಕಂದಾಯ ನೀರಿಕ್ಷಕರಾದ ಮಂಜುನಾಥ ಹಿರೇಮಠ, ಭೂಮಾಪಕರಾದ ರವಿಕುಮಾರ್ ಸೇರಿದಂತೆ ಮತ್ತಿತರರು ಇದ್ದರು..