ಕೊಪ್ಪಳದ ಭೂ ವಿಜ್ಞಾನಿ ರೂಪಾ ಸಿ.ಎಚ್ ಎಸಿಬಿ ಬಲೆಗೆ : ರೂ. 3.20 ಲಕ್ಷ ಜಪ್ತಿ

ಕೊಪ್ಪಳ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.. ಕೆಎ 35 ಪಿ 0225 ನಂಬರ್ ನ ಕಾರಿನಲ್ಲಿ ಹಣ ಸಾಗಣೆ ಮಾಡುವಾಗ ದಾಳಿ ಮಾಡಲಾಗಿದೆ. ಕೊಪ್ಪಳದ ಭೂ ವಿಜ್ಞಾನಿ ರೂಪಾ ಸಿ.ಎಚ್ ಎಸಿಬಿ ಬಲೆಗೆ ಬಿದ್ದವರು.ಕೊಪ್ಪಳ ತಾಲೂಕು ಹಿಟ್ನಾಳ ಗೇಟ್ ಬಳಿ ಕಾರಿನಲ್ಲಿ ಹಣ ಸಾಗಿಸ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಅಧಿಕಾರಿ ಬಳಿಯಿಂದ 3.20ಲಕ್ಷ ನಗದು ಜಪ್ತಿ ಮಾಡಲಾಗಿದೆ. ಪತ್ತೆಯಾದ ಹಣಕ್ಕೆ ಯಾವುದೇ ದಾಖಲೆಗಳಿಲ್ಲ ಬಿ ಎಂ ನೆಮಗೌಡ, ಎಸ್ಪಿ ಎಸಿಬಿ ಬಳ್ಳಾರಿ ಯವರ ಮಾರ್ಗದರ್ಶನದಲ್ಲಿ ಆರ್ ಎಸ್ ಉಜ್ಜನಕೋಪ್ಪ ಡಿಎಸ್ಪಿ ಎಸಿಬಿ ಕೊಪ್ಪಳ ನೇತ ಎಸ್ ಎಸ್ ಬಿಲಗಿ ಪೊಲೀಸ್ ಇನ್ಸ್‌ಪೆಕ್ಟರ್,ಗುರುರಾಜ್ ಎನ್ಎಂ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಯವರಿಂದ ಕಾರ್ಯಾಚರಣೆ ನಡೆಸಲಾಗಿತ್ತು

Please follow and like us:
error