ಕೊಪ್ಪಳದಿಂದ ಮೆಕ್ಕೆಜೋಳ ರಪ್ತು ಮತ್ತೆ ಆರಂಭ

ಕೊಪ್ಪಳ : ಇಡೀ ರಾಜ್ಯದಲ್ಲಿಯೇ ಮೆಕ್ಕಜೋಳ ಬೆಳೆಗೆ ಹಾಗೂ ರಪ್ತಿಗೆ ಹೆಸರಾಗಿದ್ದ ಕೊಪ್ಪಳ ಜಿಲ್ಲೆಯಿಂದ ಮತ್ತೆ ರಪ್ತು ಆರಂಭಗೊಂಡಿದೆ. ಬೆಲೆ ಕುಸಿತದ ಕಾರಣದಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬಂದರೂ ಸಹ ರಪ್ತು ನಿಂತು ಹೋಗಿತ್ತು. ಕೇವಲ ಕೊಪ್ಪಳ ಮಾತ್ರವಲ್ಲದೇ ರಾಜ್ಯದ ವಿವಿದೆಡೆಯಿಂದ ಖರೀದಿಸಿ ರಪ್ತು ಮಾಡುತ್ತಿದ್ದ ಜಾಂಗಡಾ ಸಹೋದರರು ವ್ಯಾಪಾರ ನಿಲ್ಲಿಸಿದ್ದರು. ಆದರೆ ಈಗ ಮತ್ತೆ ರಪ್ತು ಆರಂಭಗೊಂಡಿದೆ.‌ ಕೊಲ್ಕತ್ತಾ ಮೂಲಕ ಬಾಂಗ್ಲಾದೇಶ ಸೇರಿದಂತೆ ಇತರೆಡೆ ಮೆಕ್ಕೆಜೋಳ ಹೋಗುತ್ತಿದೆ. ಕೊಪ್ಪಳದ ರೈಲ್ವೆ ನಿಲ್ದಾಣದಲ್ಲಿ ವ್ಯಾಗನ್ ಗಳಿಗೆ ಪೂಜೆ ಮಾಡುವುದರ ಮೂಲಕ ಗೌತಮ್ ಜಾಂಗಡಾ ರಪ್ತು ಕಾರ್ಯಕ್ಕೆ ಚಾಲನೆ ನೀಡಿದರು. ರಪ್ತು ಆರಂಭವಾಗಿರುವುದರಿಂ ದ ರೈತರಲ್ಲಿ ವ್ಯಾಪಾರಸ್ಥರಲ್ಲಿ ಸಂತಸ ಉಂಟಾಗಿದೆ.

Please follow and like us:
error