ಕೊಪ್ಪಳದಲ್ಲಿ ಮುಂದುವರಿದ ಕರೊನಾ ಹಾವಳಿ : ಜಿಲ್ಲೆಯಲ್ಲಿ ಮತ್ತೆ ೩ ಪಾಜಿಟಿವ್ ದೃಡ

Koppal : ಕೊಪ್ಪಳ ಜಿಲ್ಲೆಯಲ್ಲಿ ಕರೋನಾ ತನ್ನ ಹಾವಳಿಯನ್ನು ಮುಂದುವರೆಸಿದೆ. ಇಂದೂ ಸಹ ಹೊಸದಾಗಿ ಜಿಲ್ಲೆಯಲ್ಲಿ ೩ ಪಾಜಿಟಿವ್ ಪ್ರಕರಣಗಳು ಧೃಡವಾಗಿವೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಬರುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಯಲಬುರ್ಗಾ ತಾಲೂಕಿನ ಗುತ್ತೂರಿನ ೨೫ ವರ್ಷದ ಯುವಕ. ಗಂಗಾವತಿ ತಾಲೂಕಿನ ಶ್ರೀರಾಮನಗರದ 35 ವರ್ಷದ ವ್ಯಕ್ತಿ ಮರಳಿಯ ೫೨ ವರ್ಷದ ಮಹಿಳೆಗೆ ಪಾಜಿಟಿವ್ ದೃಡವಾಗಿದೆ.

ಶ್ರೀರಾಮನಗರದ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಆದರೆ ಲಕ್ಷಣಗಳು ಕಂಡು ಬಂದಿವೆ. ಉಳಿದಿಬ್ಬರಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ ಗುತ್ತೂರಿನ ವ್ಯಕ್ತಿ ಬೆಂಗಳೂರಿನಿಂದ ಬಂದಿದ್ದಾನೆ. ಮರಳಿಯ ಮಹಿಳೆಗೆ ಪಿ ೮೬೬೩ ಯ ಲಿಂಕ್ ಇದೆ. ಜಿಲ್ಲೆಯಲ್ಲಿ ಒಟ್ಟು ೪೪ ಪಾಜಿಟಿವ್ ಕೇಸ್ ಬಂದಂತಾಗಿವೆ. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ೧೮ ಜನರನ್ನು ಡಿಸ್ಚಾರ್ಜ ಮಾಡಲಾಗಿದೆ . ಇನ್ನೂ ೪೨೬ ಜನರ ರಿಸಲ್ಟ್ ಬರುವುದು ಬಾಕಿ ಇದೆ ಎಂದು

ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ

Please follow and like us:
error