ಕೊಪ್ಪಳದಲ್ಲಿ ಪತ್ರಿಕಾ ದಿನಾಚರಣೆ

ಕೊಪ್ಪಳ

ಕೊಪ್ಪಳದ ವೃತ್ತಿ ಪತ್ರಕರ್ತ ಸ್ನೇಹಿತರಿಂದ ನಗರದ ಸಿಂಪಿಲಿಂಗಣ್ಣ ರಸ್ತೆಯ ಹಕ್ಕಂಡಿ ಕಾಂಪ್ಲೆಕ್ಸ್ ನಲ್ಲಿ ಆವರಣದಲ್ಲಿ ವಿವಿಧ ಪತ್ರಿಕೆಗಳ ಸಂಪಾದಕರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆಯನ್ನು ಸರಳವಾಗಿ ಶುಕ್ರವಾರ ಆಚರಿಸಿದರು

ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಸಂಪಾದಕರಾದ ಹರೀಶ್, ಎನ್ ಎಮ್ ದೊಡ್ಡಮನಿ, ಬಸವರಾಜ ಗೂಡ್ಲಾನೂರ, ಸಿರಾಜ್ ಬಿಸರಳ್ಳಿ ಚಾಲನೆ ನೀಡಿದರು

ಈ ಸಂದರ್ಭದಲ್ಲಿ ಕೋಟೆ ಕಂದಬ ಪತ್ರಿಕೆಯ ಸಂಪಾದಕರು ಮುಖ್ಯ ಅತಿಥಿಗಳಾಗಿ ಎನ್ ಎಮ್ ದೊಡ್ಡಮನಿ ಭಾಗವಹಿಸಿ ಮಾತನಾಡಿ, ಪತ್ರಿಕೋದ್ಯಮಕ್ಕೆ ದೊಡ್ಡ ಇತಿಹಾಸವಿದೆ. ಬೆದರಿಕೆಗಳು ಹಾಗೂ ಆರ್ಥಿಕ ಪರಿಸ್ಥಿತಿಯ ನಡುವೆ ಪತ್ರಿಕೆಗಳನ್ನು ನಡೆಸುವುದು ಕಷ್ಟ, ಅದ್ರೂ ಪತ್ರಕರ್ತ ನಿತ್ಯ ಸಮಾಜದಲ್ಲಿ ನಡೆಯುವ ಘಟನೆಗಳನ್ನು ಜನರ ಮುಂದೆ ತರುವ ಕೆಲಸ ಮಾಡುತ್ತವೆ. ಆದರಿಂದ ಎಲ್ಲರೂ ವೃತ್ತಿ ಧರ್ಮವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ.

ಇನ್ನೋರ್ವ ಅತಿಥಿ ವಿನಾಯವಾಣಿ ಪತ್ರಿಕೆಯ ಸಂಪಾದಕ ಬಸವರಾಜ ಗೂಡ್ಲಾನೂರು ಮಾತನಾಡಿ, ಇಂದು ಪತ್ರಿಕೋದ್ಯಮದಲ್ಲಿ ಸಾಕಷ್ಟು ಪೈಪೋಟಿ ಇದೆ. ಇದರ ಮಧ್ಯೆ ಸಣ್ಣ ಪತ್ರಿಕೆಗಳು ಅಳಿವು ಉಳಿವಿನಲ್ಲಿವೆ. ಒಂದು ಸ್ಥಳೀಯ ಪತ್ರಿಕೆ ನಡೆಸುವುದು ಬಹಳ ಕಷ್ಟ ಆದ್ರೂ ಸಂಕಷ್ಟದಲ್ಲಿ ಪತ್ರಿಕೆಗಳು ನಡೆಯುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುದಿನ ಪತ್ರಿಕೆಯ ಸಂಪಾದಕ ಹರೀಶ್ ಮಾತನಾಡಿ, ಪತ್ರಿಕೆಯನ್ನು ವಿತರಿಸುವವನ ಕೆಲಸ ಬಹಳ ಮುಖ್ಯ, ಪತ್ರಿಕೆಯನ್ನು ಸಿದ್ಧಪಡಿದಿ ಪ್ರಕಟಿಸುವುದು ಒಂದು ಕಡೆ ಶ್ರಮವಾದ್ರೆ ಇನ್ಮೊಂದಡೆ ಪತ್ರಿಕೆಯನ್ನು ತಲುಪಿಸುವುದು ಅಷ್ಟೇ ಮುಖ್ಯ. ಅಚ್ಚುಮೊಳೆಯಿಂದ ಕಂಪ್ಯುಟರ್ ತಂತ್ರಜ್ಞಾನದವರೆಗೆ ಬಂದಿದ್ದೇವೆ. ಇಂದು ಪತ್ರಿಕೆಗಳನ್ನು ನಡೆಸುವುದು ಸವಾಲಿನ ಕೆಲಸ, ದೊಡ್ಡ ಮಟ್ಟದ ಪತ್ರಿಕೆಗಳಲ್ಲಿ ಪತ್ರಕರ್ತ ಕೆಲಸ ಕಳೆದುಕೊಳ್ಳುತ್ತಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದರು

ಪ್ರಜಾಟಿವಿ ವರದಿಗಾರ ಸಿರಾಜ್ ಬಿಸರಳ್ಳಿ ಪ್ರಸ್ತಾವಿಕ ಮಾತನಾಡಿ, ಪತ್ರಿಕೋದ್ಯಮದಲ್ಲಿ ಯಾರು ದೊಡ್ಡವರಲ್ಲಿ ಕಿರಿಯರಲ್ಲ. ಎಲ್ಲರೂ, ಸಮನಾಗಿ ಕೆಲಸ ಮಾಡಬೇಕಾಗಿದೆ. ಸಣ್ಣಪುಟ್ಟ ಜಗಳ ದೋಷಗಳಿದ್ದರೂ ಸರಿಪಡಿಸಿಕೊಳ್ಳುವಂತ ಮನಸ್ಸು ಇರಬೇಕು. ನಾವು ಸಮಾಜವನ್ನು ತಿದ್ದುವವರು‌. ಇನ್ನೊಬ್ಬರು ನಮ್ಮನ್ನು ಬೆಟ್ಟು ಮಾಡಿ ತೋರಿಸುವಂತ ಕೆಲಸವಾಗಬಾರದು ಎಂದರು

ಪತ್ರಕರ್ತರಾದ ಬಸವರಾಜ ಕರ್ಕಿಹಳ್ಳಿ, ಪವನ್ ದೇಶಪಾಂಡೆ, ಶಿವರಾಜ ನುಗಡೋಣಿ, ಈರಣ್ಣ ಕಳ್ಳಿಮನಿ, ರಾಜಸಾಬ್ ತಾಳಿಕೋಟಿ, ಆರ್ ಬಿ ಪಾಟೀಲ್, ಶಿವಕುಮಾರ್ ಹಿರೇಮಠ ಮಾತನಾಡಿ, ಇಂದು ಪತ್ರಕರ್ತರ, ಕ್ಯಾಮೆರಾಮಾನ್ ಗಳ ಸ್ಥಿತಿ ಬಹಳ ಚಿಂತಜನಕವಾಗಿದೆ. ಕೊರೊನಾ ಸೋಂಕಿನಿಂದ ಆರ್ಥಿಕ ಸಂಕಷ್ಟ ಎದುರಾಗಿದೆ. ಪತ್ರಕರ್ತರು ಕ್ಯಾಮೆರಾಮಾನ್ ಗಳು ತಮ್ಮ ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

Please follow and like us:
error