ಕೊಪ್ಪಳದಲ್ಲಿ ಇಂದು ಮತ್ತೆ ೧೦ ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಜಿಲ್ಲೆಯಲ್ಲಿ ಪಾಜಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಮತ್ತೆ ೧೦ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ೧೪೯ ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ.ಕರೋನಾ ಸೋಂಕಿತ ಇಬ್ಬರು ಸಾವನ್ನಪ್ಪಿದ್ದಾರೆ, ಇಂದು ೧೦ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ ಕುಷ್ಟಗಿ ೩, ಕೊಪ್ಪಳ ೩ ಹಾಗೂ ಗಂಗಾವತಿ ತಾಲೂಕಿನಲ್ಲಿ ೪ ಪ್ರಕರಣಗಳು ವರದಿಯಾಗಿವೆ. ಟ್ರಾವೆಲ್ ಹಿಸ್ಟರಿ ಇಲ್ಲದ ಮೂವರಿಗೆ ಪಾಜಿಟಿವ್ ಬಂದಿದೆ. ಹೆಚ್ಚುತ್ತಿರುವ ಪಾಜಿಟಿವ್ ಪ್ರಕರಣಗಳ ಸಂಖ್ಯೆಯಿಂದ ಜನತೆಯಲ್ಲಿ ಆತಂಕ ಹೆಚ್ಚಿದೆ ಈ ಹಿನ್ನಲೆಯಲ್ಲಿ ಜನತೆ ಸ್ವಯಂ ಲಾಕಡೌನ್ ಗೆ ಮುಂದಾಗಿದ್ದಾರೆ.

ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡದಲ್ಲಿ 2, ಬಲಕುಂದಿ ಗ್ರಾಮದಲ್ಲಿ 1, ಕೊಪ್ಪಳ ತಾಲೂಕಿನ ಲಾಚನಕೇರಿಯಲ್ಲಿ 1, ಕೊಪ್ಪಳ ನಗರದಲ್ಲಿ 2, ಗಂಗಾವತಿ ತಾಲೂಕಿನ ಬೂದಗುಂಪಾದಲ್ಲಿ 1, ಗುಂಡಮ್ಮ ಕ್ಯಾಂಪ್‌ನಲ್ಲಿ 1, ಮುರಾರಿ ಕ್ಯಾಂಪ್‌‌ನಲ್ಲಿ 1 ಹಾಗೂ ಗಂಗಾವತಿ ನಗರದಲ್ಲಿ 1 ಕೊರೊನಾ ಕೇಸ್ ದೃಢಪಟ್ಟಿವೆ.

Please follow and like us:
error