ಕೊಪ್ಪಳದಲ್ಲಿ ಇಂದು ಮತ್ತೆ ಎರಡು ಪಾಜಿಟಿವ್ ಪ್ರಕರಣಗಳು

ಕೊಪ್ಪಳ : ಜಿಲ್ಲೆಯಲ್ಲಿ ಕರೋನಾ ಪಾಜಿಟಿವ್ ಸಂಖ್ಯೆ ಏರುತ್ತಲೇ ಇದೆ. ಇಂದು ಮತ್ತೆ ಎರಡು ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ಕೊಪ್ಪಳ ಜಿಲ್ಲೆಯ ಒಟ್ಟು ಪಾಜಿಟಿವ್ ಸಂಖ್ಯೆ ೮೨ ಕ್ಕೇರಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ. ಕುಷ್ಟಗಿ ತಾಲೂಕಿನ ಯರಿಗೋನಾಳದ 36 ವರ್ಷದ ಹೈದ್ರಾಬಾದಿನಿಂದ ಬಂದ ವ್ಯಕ್ತಿಗೆ ಹಾಗೂ ಕುಷ್ಟಗಿ ತಾಲೂಕಿನ ನವಹಳ್ಳಿ ಗ್ರಾಮದ ೬೭ ವರ್ಷದ ವ್ಯಕ್ತಿಗೆ ಕರೋನಾ ಪಾಜಿಟಿವ್ ಬಂದಿದೆ. ಇದರೊಂದಿಗೆ ಪಾಜಿಟಿವ್ ಪ್ರಕರಣಗಳ ಸಂಖ್ಯೆ ೮೨ಕ್ಕೇರಿದೆ. ೨೧ ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಒಬ್ಬರು ಸಾವನ್ನಪ್ಪಿದ್ದಾರೆ. ೬೦೨ ಜನರ ವರದಿ ಇನ್ನೂ ಬರಬೇಕಿದೆ.

Please follow and like us:
error