ಕೊಪ್ಪಳದಲ್ಲಿ‌ ಜಲಕ್ರಾಂತಿಗೆ ಚಾಲನೆ ನೀಡಿದ ಗವಿಶ್ರೀಗಳು.

ಕೊಪ್ಪಳ : ನಗರದ ದದೆಗಲ್ ರಸ್ತೆಬಳಿ ಇರುವ ಹಿರೇಹಳ್ಳ‌ ಸೇತುವೆಯ ಕೇಳಭಾಗದಲ್ಲಿ ಹಿರೇಹಳ್ಳ ಪುನಃಶ್ಚೇತನ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಜಿಲ್ಲೆಯ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು, ಮಠದ ಶ್ರೀಗಳು,

ಸ್ಥಳೀಯರು, ಹಿರೆಮುಖಂಡರು, ವಿದ್ಯಾರ್ಥಿಗಳು ” ನಮ್ಮ ನಡೆ ಹಿರೇಹಳ್ಳ ಪುನೇಶ್ಚತನದ ಕಡೆ” ಅಂತ ಪ್ರತಿಜ್ಞೆ ಮೂಲಕ ಕಾರ್ಯಾರಂಭ ಮಾಡಲಾಯಿತು. ಗವಿಶ್ರೀಗಳು ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಮೂರು ಜೆಸಿಬಿಗಳ ಮೂಲಕ ಕೆಲಸ ಶುರುವಾಗಿದೆ. ಕಿನ್ನಾಳ ಡ್ಯಾಂನಿ ತುಂಗಭದ್ರ ನದಿಯವರೆಗೆ ಸುಮಾರು ೨೧ ಕಿ.ಮೀ ವರೆಗೆ ಹರಿಯುವ ಹಿರೇಹಳ್ಳ ಪುನಶ್ಚೇತನ ಕಾರ್ಯನಡೆಯುತ್ತದೆ. ೨೧ ವರ್ಷಗಳ ಹಿಂದೆ ಈ ಭಾಗಕ್ಕೆ ಕಾವೇರಿಯಂತೆ ಸ್ವಚ್ಛಂದವಾಗಿ ನೀರು ಹರಿಯುತ್ತಿತ್ತು. ೨೫ ಗ್ರಾಮಗಳಿಗೆ ಈ ನೀರು ಜೀವಜಲವಾಗಿತ್ತು. ಆದ್ರೆ ಇಂದು ಕೊಳಚೆ ನೀರು ಹರಿಯುತ್ತಿದೆ. ಕಸ ತುಂಬಿಕೊಂಡಿದೆ. ೧.೬೨ ಟಿಎಂಸಿ ನೀರು ಸಾಮರ್ಥ್ಯ ಇರುವ ಹಿರೇಹಳ್ಳ ಡ್ಯಾಂನಲ್ಲಿ ಹೂಳುತುಂಬಿದೆ. ಮತ್ತೊಮ್ಮ ಈ ಹಳ್ಳವನ್ನು ಶುದ್ಧಗೊಳಿಸಿದ್ರೆ ರೈತರ ಜನುವಾರುಗಳ ಸಂಕಷ್ಟಕ್ಕೆ ನೆರವಾಗುತ್ತದೆ, ೧ ಕಿಲೋ ಮೀಟರ್ ಗೆ ಒಂದು ಚೆಕ್ ಡ್ಯಾಂ ನಿರ್ಮಿಸಿದರೆ, ನೀರಿನ ಕೊರತೆ ಎನ್ನುವುದು ಇರುವುದಿಲ್ಲ. ಇಂತಹ ಒಂದು ಪ್ರಯೋಗವನ್ನು ಬಲ್ಬೀರ್ ಸಿಂಗ್ ಪಂಜಾಬ್ ನಲ್ಲಿ ಪ್ರಯೋಗ ಮಾಡಿದ್ದಾರೆ ಹಾಗೂ ಯಶಸ್ವಿಯಾಗಿದ್ದಾರೆ ಕೊಪ್ಪಳ ಕೂಡ ಅದರಂತ ಮಾದರಿ ಆಗಬೇಕು ಅಂತ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಪಣತೊಟ್ಟು ಕಾರ್ಯಕ್ಕೆ ಇಂದು ಚಾಲನೆ ನೀಡಿದ್ದಾರೆ. ಶಾಸಕರು, ಉದ್ಯಮಿಗಳು, ಜನಪ್ರತಿನಿಧಿಗಳು, ಹಿರಿಯ ಮುಖಂಡರು ಸ್ವ ಇಚ್ಛೆಯಿಂದ ಹಣವನ್ನು ನೀಡುವ ಮೂಲಕ ಕೈಜೋಡಿಸಿದ್ದು, ಶಾಸಕ ರಾಘವೇಂದ್ರ ಹಿಟ್ನಾಳ ವಯಕ್ತಿಕವಾಗಿ ೧೦ ಲಕ್ಷ ನೀಡಿದ್ದಲ್ಲದೇ, ಶಾಸಕರಿಗೆ ಬರುವ ಅನುದಾನದಲ್ಲಿ ₹ ೩೨ ಕೋಟಿ ಹಿರೇಹಳ್ಳ ಅಭಿವೃದ್ಧಿ ಕೆಲಸಗಳಿಗೆ ನೀಡಲು ಘೋಷಿಸಿದರು. ಸಹಾಯ ಮಾಡಲು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ೭೦೯೭೧೯೮೬೭೫ಗೆ ಮಿಸ್ ಕಾಲ್ ಕೊಡಬಹುದು, ವಿವರಣೆಗಾಗಿ www. nammahirehalla.com ಲ್ಲಿ ನೋಡಲು ಶ್ರೀಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ‌. ಸುನೀಲ್ ಕುಮಾರ, ಎಸ್ಪಿ ರೇಣುಕಾ ಎಸ್ ಕುಮಾರ್ , ಸಂಸದ ಕರಡಿ ಸಂಗಣ್ಣ, ಪರಣ್ಣ ಮುನವಳ್ಳಿ, ಮಾಜಿ ಜಿ.ಪಂ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಹಾಲಿ ಜಿ.ಪಂ ಅಧ್ಯಕ್ಷ ವಿಶ್ವನಾಥ ರೆಡ್ಡಿ , ಸಿ.ವಿ.ಚಂದ್ರಶೇಖರ, ಶ್ರೀನಿವಾಸ ಗುಪ್ತಾ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.