ಕೇವಲ ೮ ತಾಸಿನಲ್ಲಿ ಕೊಲೆ ಪ್ರಕರಣ ಬೇಧಿಸಿದ ಕೊಪ್ಪಳ ಪೋಲಿಸರು : ಗಂಡನ ಕೊಲೆ ಮಾಡಿಸಿದ ಹೆಂಡತಿ,ಪ್ರಿಯಕರ ಬಂಧನ

ಕೊಪ್ಪಳ: ಆ ಮಹಿಳೆಗೆ ಮದುವೆಯಾಗಿ ಮೂರು ಮಕ್ಕಳಿದ್ದವು. ಆದರೂ ಪರಪುರುಷನ ಸಖ್ಯಕ್ಕಾಗಿ ಗಂಡನ ಹತ್ಯೆಗೆ ಸಾಥ್ ನೀಡಿ ಆಕೆಯನ್ನು ಸೇರಿದಂತೆ ಒಟ್ಟು ಮೂವರು ಪೊಲೀಸರ ಬಲೆಗೆ ಬಿದ್ದ ಘಟನೆ ರವಿವಾರ ಕೊಪ್ಪಳ ತಾಲೂಕಿನ ಅಳವಂಡಿ ಠಾಣಾ ವ್ಯಾಪ್ತಿಯ ಬೈರಾಪುರದಲ್ಲಿ ನಡೆದಿದೆ.

ಯಮನವ್ವ ಮತ್ತು ನಿಂಗಪ್ಪ ಬೆಟಗೇರಿ ಏಳು ವರ್ಷಗಳ ಹಿಂದೆ ಮದುವೆಯಾಗಿದ್ದರು. ಮೂವರು ಮಕ್ಕಳನ್ನು ಹೊಂದಿದ್ದ ಇವರ ಕುಟುಂಬದಲ್ಲಿ ಈಚೆಗೆ ಕಲಹ ಶುರುವಾಗಿತ್ತು. ಪತ್ನಿ ಯಮನವ್ವ ಮತ್ತು ಅದೇ ಗ್ರಾಮದ ಶಿವಕುಮಾರ್ ತಳವಾರ ನಡುವೆ ಇದ್ದ ಅನೈತಿಕ ಸಂಬಂಧ ಪತಿ ನಿಂಗಪ್ಪನಿಗೆ ಗೊತ್ತಾಗಿತ್ತು. ಹೆಂಡತಿಯನ್ನು ಕೊಲೆ ಮಾಡುವುದಾಗಿ ಪದೇ ಪದೇ ಹೇಳುತ್ತಿದ್ದ. ಪ್ರಿಯಕರನ ಸಖ್ಯಕ್ಕಾಗಿ ಜುಲೈ 2ರಂದು ಗಂಡನ ಕಣ್ಣಿಗೆ ಕಾರಪುಡಿ ಎರಚಿ, ಬಾಯಿ ಕಟ್ಟಿ ಪ್ರಿಯಕರನನ್ನು ಕರೆಸಿ ಹಳ್ಳದ ಕಡೆಗೆ ಕರೆದೊಯ್ದು, ಆತನನ್ನು ಕೊಲೆ ಮಾಡುವಂತೆ ತಿಳಿಸಿ ಮನೆಗೆ ಮರಳಿದ್ದಾಳೆ. ಶಿವಕುಮಾರ್ ತಳವಾರ ಹಾಗೂ ಆತನ ಸ್ನೇಹಿತ ವಿಜಯ ಉಪ್ಪಾರ್ ಸೇರಿಕೊಂಡು ನಿಂಗಪ್ಪನನ್ನು ಹಳ್ಳದ ಉಸುಕಿನಲ್ಲಿ ಹಾಕಿ‌ ಮುಚ್ಚಿ ಕೊಲೆ ಮಾಡಿದ್ದಾರೆ. ನಿಂಗಪ್ಪ ಕಾಣೆಯಾಗಿರುವ ಕುರಿತು ತನಿಖೆ ನಡೆಸಿದ ಪೊಲೀಸರು ಕೊನೆಗೂ ಕೊಲೆ ರಹಸ್ಯವನ್ನು ಬೇಧಿಸಿ ಯಮನವ್ವ, ಪ್ರಿಯಕರ ಹಾಗೂ ಪ್ರಿಯಕರನ ಸ್ನೇಹಿತನನ್ನು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ರವಿ ಉಕ್ಕುಂದ ನೇತೃತ್ವದಲ್ಲಿ ಅಳವಂಡಿ ಪಿಎಸೈ ಬಸವರಾಜ್ ಅಡವಿಬಾವಿ ಹಾಗೂ ಅವರ ತಂಡ ಬಂಧಿಸಿದೆ.

, ದಿನಾಂಕ : 04-07-2020 ರಂದು ಮೃತನ ಅಣ್ಣನಾದ ಫಿತ್ಯಾದಿ ಯಲ್ಲಪ್ಪ ತಂದೆ ಸಂಗಪ್ಪ ಬೆಟಗೇರಿ , ಸಾ : ಬೈರಾಪೂರ ಇವರು ಅಳವಂಡಿ ಠಾಣೆಗೆ ಹಾಜರಾಗಿ ತನ್ನ ತಮ್ಮನಾದ ನಿಂಗಪ್ಪ 32 ವರ್ಷ ಈತನು ದಿನಾಂಕ : 02-07-2020 ರಂದು ರಾತ್ರಿ 8:00 ಗಂಟೆಯ ನಂತರ ಕಾಣೆಯಾಗಿದ್ದು ನಂತರ ದಿನಾಂಕ : 04-07-2020 ರಂದು ಬೋಚನಹಳ್ಳಿ ಗ್ರಾಮ ಸೀಮಾ ಹಿರೆ ಹಳ್ಳದಲ್ಲಿ ನನ್ನ ತಮ್ಮ ನಿಂಗಪ್ಪನನ್ನು ಯಾರೋ ದುಷ್ಕರ್ಮಿಗಳು ಎಲ್ಲಿ ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಹೂತು ಹಾಕಿದ್ದು ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದು ಇರುತ್ತದೆ . ನಂತರ ಸದರ ಪ್ರಕರಣ ಬೇಧಿಸಲು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷರು ಕೊಪ್ಪಳ ರವರಾದ ಶ್ರೀಮತಿ ಸಂಗಿತಾ ಜಿ . ಹಾಗೂ ಮಾನ್ಯ ಶ್ರೀ ವೆಂಕಟಪ್ಪ ನಾಯಕ , ಉಪಾಧೀಕ್ಷಕರು ಕೊಪ್ಪಳ ರವರುಗಳ ಮಾರ್ಗದರ್ಶನದಲ್ಲಿ ಕೊಪ್ಪಳ ಗ್ರಾಮೀಣ ವೃತ್ತದ ವಿಪಿಐ ರವರಾದ ಶ್ರೀ ರವಿ ಸಿ . ಉಕ್ಕುಂದ ಇವರ ನೇತೃತ್ವದಲ್ಲಿ ಅಳವಂಡಿ ಪಿ.ಎಸ್.ಐ. ಶ್ರೀ ಬಸವರಾಜ ಅಡವಿಬಾವಿ ಮತ್ತು ಸಿಬ್ಬಂದಿಯವರಾದ ಶ್ರೀ ಬಸವರಾಜ ಬಜೇಂತ್ರಿ ಎ.ಎಸ್.ಐ. ಶ್ರೀ ವೆಂಕಟೇಶ ಹೆಚ್.ಸಿ. 64 ಶ್ರೀಮತಿ ನಿಂಗಮ್ಮ ಮಹೇಶ್ ಪಿ 205 ಶ್ರೀ ಗಂಗಾಧರ ಪಿಸಿ 57 ಶ್ರೀ ಅಮರೇಗೌಡ ವಿಸಿ 502 ಶ್ರೀ ಜಂಧಿವೀರ ಪಿಸಿ 281 ಕುಮಾರಿ ಅರ್ಚನಾ ಮ.ಪಿ.ಸಿ. 538 ಶ್ರೀ ಕನಕಪ್ಪ ಪಿಸಿ 26 ಶ್ರೀ ಗವೀಶ್ವರ ಪಿಸಿ 29 ಶ್ರೀ ಶಿವಪುತ್ರಪ್ಪ ಹೆಚ್.ಸಿ. 248. ಶ್ರೀ ಚಂದಪ್ಪ ನಾಯ್ಕ ಹೆಚ್.ಸಿ. 232 ಶ್ರೀ ಮಲ್ಲಿಕಾರ್ಜುನ ಪಿಸಿ 204 ಹಾಗೂ ಚಾಲಕರಾದ ಶ್ರೀ ನಿಂಗಪ್ಪ ಎ.ಹೆಚ್.ಸಿ , ಶ್ರೀ ಮುದುಕಪ್ಪ ಎ.ಪಿ.ಸಿ. ರವರೊಂದಿಗೆ ಪ್ರಕರಣದಲ್ಲಿ ಕೊಲೆ ಮಾಡಿದ ಆರೋಪಿತರ ಪತ್ತೆ ಕಾರ್ಯದಲ್ಲಿರುವಾಗ ಆಪಾದಿತರಾದ ಯಮುನಾಕ್ಷಿ ಗಂಡ ನಿಂಗಪ್ಪ ಬೆಟಗೇರಿ , 28 ವರ್ಷ , ಶಿವಪ್ಪ ತಂದೆ ಮಂಜಪ್ಪ ಪುಜಾರ 30 ವರ್ಷ ಸಾ : ಬೋಚನಹಳ್ಳಿ ಹಾಗೂ ವಿಜಯ ತಂದೆ ಕಾಶಪ್ಪ ಬ್ಯಾಡಗಿ , ವಯಸ್ಸು : 23 ವರ್ಷ ಸಾ : ಬೈರಾಪೂರ . ಇವರುಗಳನ್ನು ವಿಚಾರಣೆಗೊಳಪಡಿಸಲಾಗಿ ಮೃತ ನಿಂಗಪ್ಪನನ್ನು ಅತನ ಹೆಂಡತಿಯಾದ ಯಮುನಾಕ್ಷಿ ಮತ್ತು ಶಿವಪ್ಪ ಇವರಿಬ್ಬರ ಅನೈತಿಕ ಸಂಭಂಧಕ್ಕೆ ಅಡ್ಡಿಯಾದ ಹಿನ್ನಲೆಯಲ್ಲಿ ಕೋಲೆ ಮಾಡಿರುವದಾಗಿ ಒಪ್ಪಿಕೊಂಡಿದ್ದರಿಂದ ದಸ್ತಗಿರಿ ಮಾಡಿ ಅವರಿಂದ ಕೃತ್ಯಕ್ಕೆ ಬಳಸಿದ ಎರಡು ಮೊಟಾರ ಸೈಕಲ , ಮೊಬೈಲ್ ಸೊನ್ , ಗೋಣಿಚೀಲ , ಸಲಕೆ ಹಗ್ಗ ಇವುಗಳನ್ನು ಜಪ್ತಿ ಪಡಿಸಿಕೊಂಡು ವ್ಯಾಯಂಗ ಬಂಧನ ಕುರಿತು ಕಳುಹಿಸಿಕೊಟ್ಟಿದ್ದು ಈ ಬಗ್ಗೆ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೊಪ್ಪಳ ರವರು ಕೊಲೆ ಪ್ರಕರಣ ಬೇಧಿಸುವಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಶ್ಲಾಘನೆ ವ್ಯಕ್ತ ಪಡಿಸಿದ್ದು ಇದೆ .
Please follow and like us:
error