ಕೇಂದ್ರ ಸರಕಾರದ ಜನವಿರೋಧಿ ನಡೆ ವಿರುದ್ಧ: CPI(M) ಪ್ರಚಾರಾಂದೋಲನ

ಗಂಗಾವತಿ: ದೇಶದಲ್ಲಿ ಕೋವಿಡ್ – 19 ರ ಹಾವಳಿ ತೀವ್ರವಾಗುತ್ತದೆ ಈಗಾಗಲೇ ದೇಶದಲ್ಲಿ ಇವತ್ತು ಸಾವಿರ ಅಮಾಯಕ ಪ್ರಜೆಗಳು ಸಾವನ್ನಪ್ಪುತ್ತಿದ್ದಾರೆ. ಸುಮಾರು 50 ಲಕ್ಷದಷ್ಟು ಜನ ಈ ಭಯಂಕರ ಸಾಂಕ್ರಾಮಿಕ ಪಿಡುಗಿನ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯ ದಿನಗಳ ಭವಿಷ್ಯ ನುಡಿಯುತ್ತಿದ್ದ ಜಾದುಗಾರ ಮೋದಿ ತನ್ನ ವೈಫಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಒಂದೆಡೆ ಗಡಿಯಲ್ಲಿ ಯುದ್ಧೋನ್ಮಾನವನ್ನು ಹುಟ್ಟು ಹಾಕಿ ಜನರಲ್ಲಿ ಆತಂಕವನ್ನು ಉಂಟುಮಾಡುತ್ತಿದ್ದಾರೆ ಎಂದು CPI(M) ತಾಲೂಕ ಕಾರ್ಯದರ್ಶಿ ನಿರುಪಾದಿ ಬೆಣಕಲ್ ಹೇಳಿದರು

ಅವರು ಇಂದು ಸ್ಥಳೀಯ ಪಕ್ಷದ ಬಜಾರ ಹಮಾಲರು ಮತ್ತು ಗಂಜ್ ಶಾಖೆವತಿಯಿಂದ ಪಕ್ಷದ ಕೇಂದ್ರ ಮತ್ತು ರಾಜ್ಯ ಸಮಿತಿ ಕರೆಯ ಮೇರೆಗೆ ಪ್ರಚಾರಾಂದೋಲನದ ಭಾಗವಾಗಿ ಇಂದು ನಗರದ CBS ಸರ್ಕಲ್, ಗಂಜನಲ್ಲಿ ಮಹಾರಾಣ ಪ್ರತಾಪ ಸರ್ಕಲ್, ಎಪಿಎಂಸಿ,ಕೊಪ್ಪಳ ರೋಡನಲ್ಲಿ ಸಾರ್ವಜನಿಕರಿಗೆ ಕೇಂದ್ರದ ಜನವಿರೋಧಿ ನೀತಿ ಕುರಿತು ಮಾಹಿತಿ ಕೊಟ್ಟರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಹಾಗೂ ಒಬಿಸಿ ಮತ್ತು ವಿಕಲಾಂಗರಿಗೆ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಹಾಗೂ ಖಾಲಿ ಇರುವ ಹುದ್ದೆಗಳನ್ನು ಬರ್ತಿ ಮಾಡಬೇಕು. ತಕ್ಷಣದಿಂದಲೇ ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳವರೆಗೆ ಪ್ರತಿಯೊಬ್ಬ ವ್ಯಕ್ತಿಗೆ 10 ಕೆ,ಜಿ,ಯಂತೆ ಉಚಿತ ಆಹಾರಧಾನ್ಯಗಳನ್ನು ವಿತರಣೆ ಮಾಡಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಿಸ್ತರಿಸಬೇಕು ಹಾಗೂ ಕೂಲಿ ದರವನ್ನು ಹೆಚ್ಚಿಸಬೇಕು ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯಯನ್ನು ಪ್ರಕಟಿಸಬೇಕು, ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಅಮಾನತು ರದ್ದು ಮಾಡಿರುವುದನ್ನು ಎಲ್ಲ ಪ್ರಸ್ತಾವನೆಗಳನ್ನು ಹಿಂತೆಗೆದುಕೊಳ್ಳಬೇಕೆಂದು ಈ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಯಿತು.ಪಕ್ಷದ ಪ್ರಮುಖರಾದ ಹನುಮಂತಪ್ಪ, ನಾಗೇಶ ನಾಯ್ಕ, ಕೃಷ್ಣಪ್ಪ ನಾಯಕ, ಇಬ್ರಾಹಿಂ ಮೈಬು ಸಾಬ್, ಮಂಜುನಾಥ ನಾಯಕ, ಬಸವರಾಜ, ಚಂದುಸಾಭ ಇತರರು ಇದ್ದರು.

Please follow and like us:
error