ಕೇಂದ್ರದ ಪರಿಹಾರ ವಿಳಂಭವಾಗಿದ್ದಕ್ಕೆ ವಿಷಾದವಿದೆ- ಸಂಸದ ಕರಡಿ ಸಂಗಣ್ಣ

Koppal ನೆರೆಪೀಡಿತ ಪ್ರದೇಶಗಳ ಪರಿಹಾರಕ್ಕಾಗಿ ಕೇಂದ್ರ ಸರಕಾರ 1,200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ 

ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್, ಅಮಿತ್ ಷಾ ಅಭಿನಂದನಾರ್ಹರು ಎಂದು ಕೊಪ್ಪಳದ ಸಂಸದ ಕರಡಿ ಸಂಗಣ್ಣ ತಿಳಿಸಿದರು. ಕೊಪ್ಪಳದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ರಾಜ್ಯದ ನೆರೆಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಿ ಪ್ರಾಥಮಿಕ ಹಂತದಲ್ಲಿ ಪರಿಹಾರದ ಹಣವನ್ನು ಬಿಡುಗಡೆ ಮಾಡಿದ್ದು, ಇನ್ನೂ ನಷ್ಟವಾಗಿರುವ ಕುರಿತು ನಿಖರ ಅಂಕಿ-ಆಂಶ ಪಡೆಯುತ್ತಿದೆ. ಶೀಘ್ರವೇ ಎರಡನೇ ಹಂತದ ಅನುದಾನವೂ ಬಿಡುಗಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಟೆಕ್ನಿಕಲ್ ರಿಪೋರ್ಟ್ ಕೊಡುವಲ್ಲಿ ತಡವಾಗಿರುವ ಹಿನ್ನೆಲೆ, ಅನುದಾನ ಬರುವಲ್ಲಿ ವಿಳಂಭವಾಗಿದೆ ಎಂದರು.ಇದೇ ವೇಳೆ ಬಿಜೆಪಿ ಸಂಸದರಿಗೆ ಸೀರೆ, ಬಳೆ, ಕುಂಕುಮ ಕಳಿಸುವುದಾಗಿ ಹೇಳಿದ್ದ , ಮಾಜಿ ಸಚಿವ ಶಿವರಾಜ ತಂಗಡಗಿಯವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಸೀರೆ, ಬಳೆ, ಕುಂಕುಮ-ಇವು ಸುಮಂಗಲೆಯರ ಸಂಕೇತ. ಸಂಸ್ಕೃತಿ ಗೊತ್ತಿಲ್ಲದ ಮಾಜಿ ಮಂತ್ರಿ  ಮಹಿಳೆಯರಿಗೆ ಅಪಮಾನ ಎಸಗುವ ರೀತಿಯಲ್ಲಿ ಮಾತನಾಡಿದ್ದಾರೆ. ಮಾತೆತ್ತಿದರೆ ತಾಖತ್ ಎನ್ನುತ್ತಾರೆ. ಅಷ್ಟು ತಾಖತ್ ಇರುವ ತಂಗಡಗಿಯವರನ್ನ ಕನಕಗಿರಿ ಕ್ಷೇತ್ರದ ಜನ ಯಾಕೆ ಸೋಲಿಸಿದರು. ಬಿಜೆಪಿ ಅಭ್ಯರ್ಥಿ ಬಸವರಾಜ ದಢೇಸೂಗುರು ಅವರನ್ನ ಯಾಕೆ ಗೆಲ್ಲಿಸಿದರು ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು. ಯಾವಾಗ ನೋಡಿದರೂ ಬೆಂಗಳೂರಿನಲ್ಲೇ ಇರುವ ತಂಗಡಗಿಯವರನ್ನ ಕನಕಗಿರಿ ಕ್ಷೇತ್ರದ ಜನ ತಿರಸ್ಕರಿಸಿದ್ದಾರೆ. ಅಪರೂಪಕ್ಕೆ ಕೊಪ್ಪಳ ಜಿಲ್ಲೆಗೆ ಬಂದಾಗ ಇಂಥ ಹೇಳಿಕೆ ನೀಡುವ ಮೂಲಕ ಪೇಪರ್ ಟೈಗರ್ ಆಗ್ತಿದಾರೆ.  ಅವರು ತಮ್ಮ ಪಕ್ಷದ ಬಗ್ಗೆ ಮಾತನಾಡಲಿ, ಪಕ್ಷದಲ್ಲಿಯೇ ವಿರೋಧ ಪಕ್ಷದ ನಾಯಕನಿಗಾಗಿ ಪೈಪೋಟಿ ನಡೆದಿದೆ. ಮೊದಲು ಪಕ್ಷ ಕಟ್ಟುವ ಕೆಲಸ ಮಾಡಲಿ. ಇನ್ನು ವರ್ಗಾವಣೆ ಬಗ್ಗೆ ಮಾತನಾಡಿರುವ ತಂಗಡಿ ಅವರು ತಾವು ಮಂತ್ರಿಯಿದ್ದಾಗ ಇಂತಹ ಕೆಲಸ ಮಾಡಿರಬೇಕು. ಆ ಫೀಲಿಂಗ್ ನಲ್ಲಿ ಮಾತನಾಡಿರಬೇಕು ಅಂತಾ ಲೇವಡಿ ಮಾಡಿದರು. ಇನ್ನು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಯಾವುದೇ ಪ್ರೋಟೊಕಾಲ್ ಪಾಲಿಸುತ್ತಿಲ್ಲ. ಸಚಿವರಿಗೆ, ಸಂಸದರಿಗೆ ಮಾಹಿತಿ ನೀಡದೆ ದೊಡ್ಡ ದೊಡ್ಡ ಬ್ಯಾನರ್ ಹಾಕಿ ಕಾರ್ಯಕ್ರಮ ಮಾಡ್ತಾರೆ. ಅಭಿವೃದ್ಧಿ ಕೆಲಸಗಳಿಗೆ ಬಿಜೆಪಿ ಅಡ್ಡಿಯಾಗುವುದಿಲ್ಲ. ಪ್ರೋಟೊಕಾಲ್ ಪಾಲಿಸುವುದನ್ನ ಕಲಿಯಬೇಕು. ಇನ್ನು ಯತ್ನಾಳ ನೋಟಿಸ್ ಕುರಿತು ಪಕ್ಷದ ಆಂತರಿಕ ವಿಚಾರದಲ್ಲಿ ಪ್ರಸ್ತಾಪ ಮಾಡುಬಹುದು ಆದರೆ ಬಹಿರಂಗವಾಗಿ ಹೇಳಿಕೆಗಳನ್ನು ನೀಡಬರಾದು ಅಂತಾ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾದ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ರಾಜು  ಬಾಕಳೆ, ಚಂದ್ರಶೇಖರ ಕವಲೂರ ಉಪಸ್ಥಿತರಿದ್ದರು. 

Please follow and like us:
error