ಕೆರೆಯ ಅಂಜಿಯೋಪ್ಲಾಸ್ಟಿ ಮಾಡಬೇಕಿದೆ- ಡಿಸಿ ಸುರಳ್ಕರ್

ಕೊಪ್ಪಳ : ಕೆರೆಯನ್ನು ತುಂಬಿಸುವುದಕ್ಕೆ ಡ್ಯಾಂನಿಂದ ನೀರು ತರುವ ಸಂದರ್ಭ ಬಂದಿರುವುದು ನಿಜಕ್ಕೂ ವಿಪರ್ಯಾಸ. . ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದರು. ಗಿಣಗೇರಾ ಕೆರೆ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೆರೆಯ ಮೂಲಗಳು ಅತಿಕ್ರಮಣವಾಗಿರುವುದರಿಂದ ಕೆರೆಗೆ ನೀರು ಬರುತ್ತಿಲ್ಲ. ಹೃದಯಾಘಾತಕ್ಕೆ ಕಾರಣ ಏನು ಎನ್ನುವದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಈ ಕೆರೆಗೆ ಹೃದಯಾಘಾತವಾಗಿದೆ. ಅದಕ್ಕೆ ನಾವೆಲ್ಲರೂ ಸೇರಿ ಅಂಜಿಯೋಪ್ಲಾಸ್ಟಿ ಮಾಡಬೇಕಾಗಿದೆ. ಕೆರೆ ಮೂಲಗಳು ಬ್ಲಾಕ್ ಆಗಿರುವುದರಿಂದ ನೀರು ಬಾರದೇ ಬ್ಲಾಕ್ ಆಗಿದೆ. ಎಲ್ಲರೂ ಸೇರಿ ಅಂಜಿಯೋಪ್ಲಾಸ್ಟ್ ಮಾಡಿ ಕೆರೆಯ ಅಭಿವೃದ್ಧಿ ಮಾಡೋಣ, ಮಹಾರಾಷ್ಟ್ರ ಮಾದರಿಯಲ್ಲಿ ನಾವು ಕೆಲಸ ಮಾಡಬೇಖದೆ ಎಂದು ಹೇಳಿದರು.

Please follow and like us:
error