ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ‌ ಕಾಂಗ್ರೆಸ್ ಪಾಪದ ಫಲ; ಡಿಸಿಎಂ ಕಾರಜೋಳ

Kannadanet News ಕೊಪ್ಪಳ
ಕಳೆದ 60 ವರ್ಷದ ಕಾಂಗ್ರೆಸ್ ಆಡಳಿತದ ಪಾಪದ ಫಲವಾಗಿ ಇಂದು ಪುಂಡ-ಪೋಕರಿಗಳು ಮೆರೆಯುತ್ತಿದ್ದಾರೆ. ಪುಂಡ ಪೋಕರು ಶಾಸಕರನ್ನೂ ಬಿಡುತ್ತಿಲ್ಲ. ಕಾಂಗ್ರೆಸ್ ನಾಯಕರು ಈ ಮಟ್ಟಕ್ಕೆ ಪುಂಡರನ್ನು ಬೆಳೆಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಕೊಪ್ಪಳ ಜಿಲ್ಲೆ ಹನಮಸಾಗರ ಗ್ರಾಮದ ಸಮೀಪ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ, ಸೋಮವಾರ ಮಾತನಾಡಿದರು.
ಕಾಂಗ್ರೆಸ್ ನಾಯಕರದ್ದು ವೋಟ್ ಬ್ಯಾಂಕ್ ರಾಜಕಾರಣ. ಕಳೆದ 60 ವರ್ಷ ದೇಶದ ಆಡಳಿತ ಮಾಡಿರುವ ಕಾಂಗ್ರೆಸ್, ದೀನ- ದಲಿತರ ಉದ್ದಾರ ಮಾಡಲಿಲ್ಲ. ಸಂವಿಧಾನದ ಆಶಯದಂತೆ ದೀನ- ದಲಿತರ ಉದ್ದಾರ ಮಾಡದ್ದರೆ ಇಷ್ಟೊತ್ತಿಗೆ ದೇಶದಲ್ಲಿ ಸಮಸ್ಯೆ ಇರುತ್ತಿರಲಿಲ್ಲ. ಈ ಎಲ್ಲ ಸಮಸ್ಯೆಗೆ ಕಾಂಗ್ರೆಸ್ ದುರಾಡಳಿತವೇ ಕಾರಣ ಎಂದರು. ಕಾನೂನು ಮಂತ್ರಿ ಮಾಧುಸ್ವಾಮಿ, ಸಂಸದ‌ ಸಂಗಣ್ಣ ಕರಡಿ,‌ ಶಾಸಕ ಅಮರೇಗೌಡ ಬಯ್ಯಾಪೂರ ಸೇರಿ ಇತರರು ಇದ್ದರು.

Please follow and like us:
error