ಕೃಷಿ ಸಚಿವ ಬಿ.ಸಿ.ಪಾಟೀಲ ಟಿವಿಯಲ್ಲಿ, ಪೇಪರ್‌ನಲ್ಲಿ ಫೋಜ್ ಕೊಡ್ತಿದ್ದಾರೆ-ಕೋಡಿಹಳ್ಳಿ

ಸಿನಿಮಾದವನನ್ನು ಕರೆದುಕೊಂಡು ಬಂದು ಕೃಷಿ ಖಾತೆ ಕೊಟ್ಟಿದ್ದಾರೆ.

ಕೊಪ್ಪಳ: ರೈತರ ನಾಯಕ ಎಂದು ಕರೆಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾಕೆ ಹೀಗೇ ಮಾಡಿದರೋ ಗೊತ್ತಿಲ್ಲ. ಸಿನಿಮಾದವನನ್ನು ಕರೆದುಕೊಂಡು ಬಂದು ಕೃಷಿ ಮಂತ್ರಿ ಮಾಡಿದರು. ಆ ಸಚಿವ ಬಿ.ಸಿ.ಪಾಟೀಲ ಅವರಿಗೆ ಟೀವಿ ಮತ್ತು ಪೇಪರ್‌ನಲ್ಲಿ ಫೋಜ್ ಕೊಡೋದಷ್ಟೇ ಗೊತ್ತು ಎಂದು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಟೀಕಿಸಿದರು.

ಕೊಪ್ಪಳದ ಎಪಿಎಂಸಿ ಸಭಾಂಗಣದಲ್ಲಿ ಗುರುವಾರ ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿ ರೈತರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಮುಂದಾಗುವುಸನ್ನು ಬಿಟ್ಟು ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿಗಾಗಿ ನಡೆಯುತ್ತಿರುವ ಸರಕಾರದ ಪ್ರಯತ್ನ ಆಕ್ಷೇಪಾರ್ಹ. ಕೃಷಿ ಸಚಿವ ಬಿ.ಸಿ.ಪಾಟೀಲ ಕೃಷಿ ಕ್ಷೇತ್ರವನ್ನು ಬಂಡವಾಳಶಾಹಿಗಳ ಕೈಗೆ ಕೊಡಲು ಹೊರಟಿದ್ದಾರೆ. ಸೂಪರ್ ಮಾರ್ಕೆಟ್‌ನಂಥ ವಾಣಿಜ್ಯ ಕೇಂದ್ರಗಳಲ್ಲಿ ಕೃಷಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದು ರೈತರಿಗೆ ಅನ್ಯಾಯ ಆಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ವೇಳೆ ಸಂಘಟನೆಯ ಜಿಲ್ಲಾ ಮುಖಂಡ ನಜೀರ್‌ಸಾಬ್ ಮೂಲಿಮನಿ, ಹನುಮಂತಪ್ಪ ಹೊಳಿಯಾಚೆ ಮತ್ತಿತರರು ಇದ್ದರು.

Please follow and like us:
error