ಕೃಷಿ ಸಚಿವ ಬಿ.ಸಿ.ಪಾಟೀಲ್ ಮೀಟಿಂಗ್ ಮಾಡಿ ಸಂಜೆ ಸೂಟಕೇಸ್ ಹೆಗಲಿಗೆ ಹಾಕಿಕೊಂಡು ಹೋಗ್ತಾರೆ- ಶಿವರಾಜ್ ತಂಗಡಗಿ


ಕನ್ನಡನೆಟ್ ನ್ಯೂಸ್ : ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಕೊಪ್ಪಳಕ್ಕೆ ಬರ್‍ತಾರೆ ಮಿಟಿಂಗ್ ಮಾಡ್ತಾರೆ ಸಂಜೆ ಸೂಟಕೇಸ್ ಹೆಗಲಿಗೆ ಹಾಕಿಕೊಂಡು ಮನೆಗೆ ಹೋಗ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆರೋಪ ಮಾಡಿದರು. ಕಾಂಗ್ರೆಸ್ ನಿಂದ ಹಮ್ಮಿಕೊಳ್ಳಲಾಗಿದ್ದ ಜನದ್ವನಿ ಕಾರ್‍ಯಕ್ರಮದ ನಂತರ ಮಾತನಾಡಿದ ಸಚಿವರು ಕರೋನಾವನ್ನು ನಿಭಾಯಿಸುವುದನ್ನು ಬಿಟ್ಟು ಬೆಂಗಳೂರಿನಲ್ಲಿ ಮೀಟಿಂಗ್ ಮಾಡುತ್ತಿದ್ಧಾರೆ ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮೀಟಿಂಗ್ ಮಾಡುವುದು ಏನಿತ್ತು ? ಇಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಜನ ಸಾಯುತ್ತಿದ್ದಾರೆ. ವೆಂಟಿಲೇಟರ್ ಇಲ್ಲದೇ ಜನ ಪರದಾಡುತ್ತಿದ್ಧಾರೆ. ಇಲ್ಲಿ ಕರೋನಾ ನಿಭಾಯಿಸುವುದನ್ನು ಬಿಟ್ಟು ಮೀಟಿಂಗ್ ಮಾಡುತ್ತಿದ್ಧಾರೆ. ಯೂರಿಯಾದ ಕೃತಕ ಅಭಾವವನ್ನು ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಲ್ಲಿ ಸಚಿವರು ಮತ್ತು ಸರಕಾರ ಭಾಗಿಯಾಗಿದೆ ಎಂದು ಆರೋಪ ಮಾಡಿದರು. ಕೇವಲ ಬಿಜೆಪಿ ಸರಕಾರ ಬಂದಾಗಷ್ಟೇ ಯಾಕೆ ಯೂರಿಯಾ ಅಭಾವ ಸೃಷ್ಟಿಯಾಗುತ್ತೆ ಎಂದು ಪ್ರಶ್ನೆ ಮಾಡಿದರು.

Please follow and like us:
error