ಕೂಡ್ಲಿಗಿಯಲ್ಲಿ ಕರಡಿ ದಾಳಿ : ರೈತನಿಗೆ ಗಂಭೀರ ಗಾಯ

ಕೂಡ್ಲಿಗಿ :  ಬಳ್ಳಾರಿಯಲ್ಲಿ ಕಾಡು ಪ್ರಾಣಿಗಳ ದಾಳಿ  ಮುಂದುವರೆಯುತ್ತಲೇ ಇದೆ. ಇದೇ ವಾರದಲ್ಲಿ ಎರಡು ಬಾರಿ ಒಂದೇ ತಾಲೂಕಿನಲ್ಲಿ ಕರಡಿದಾಳಿಗಳಾಗಿದ್ದು, ರೈತರು ಕರಡಿ ದಾಳಿಯಿಂದ ಬೆಚ್ಚಿಬಿದ್ದಿದ್ದಾರೆ. ಕೂಡ್ಲಿಗಿ ತಾಲೂಕಿನಲ್ಲಿ ಕರಡಿ ದಾಳಿಯಾಗಿದೆ. ಹೊಲದಲ್ಲಿ ಎತ್ತು ಮೇಯುಸುತ್ತಿದ್ದ ರೈತನ ಮೇಲೆ ಕರಡಿ ದಾಳಿ ಮಾಡಿದ್ದು, ಕೂಡ್ಲಿಗಿಯ ತಾಲೂಕಿನ ಅಡವಿ ಸೂರವ್ವನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ‌. 

ರೈತ ಹುಲುಬಸಪ್ಪ ಕರಡಿ ದಾಳಿಗೊಳಗಾಗಿದ್ದಾರೆ. ಹುಲುಬಸಪ್ಪ ಮುಖಕ್ಕೆ ತೀವ್ರ ಗಾಯಗೊಳಿಸಿರುವ ಕರಡಿಯಿಂದ ತಪ್ಪಿಸಿಕೊಂಡಿದ್ದಾರೆ. ಕರಡಿಯ ಆರ್ಭಟಕ್ಕೆ ಧಿಕ್ಕಾಪಾಲಾಗಿ ಎತ್ತುಗಳು ಓಡಿ ಹೋಗಿವೆ. ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಗೆ ವಿಮ್ಸ್ ಗೆ ದಾಖಲು ಮಾಡಲಾಗಿದೆ.‌ ಪದೇ, ಪದೇ, ದಾಳಿಯಿಂದಾಗಿ ರೈತರು, ಭಯಭೀತರಾಗಿದ್ದಾರೆ. ಕರಡಿ ದಾಳಿ ಸಂಬಂಧ ದೂರುಗಳು ನೀಡಿದ್ದರೂ, ಪ್ರಯೋಜನವಿಲ್ಲ ಅಧಿಕಾರಿಗಳು ಯಾವುದೆ ರೀತಿಯ ಕ್ರಮಕೈಗೊಳ್ಳುತ್ತಿಲ್ಲ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Please follow and like us:
error