ಕುಷ್ಟಗಿ ಪುರಸಭೆ ಬಿಜೆಪಿ ಪಾಲು : ಕಾಂಗ್ರೆಸ್ ಗೆ ಮುಖಭಂಗ

ಕುಷ್ಟಗಿ : ರಾಜ್ಯಾದ್ಯಂತ ಸುಮಾರು ಎರಡೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಮೀಸಲಾತಿ ವಿಷಯವಾಗಿ ತುಂಬಾ ವಿಳಂಬವಾಗಿದ್ದರೂ ಕೊನೆಗೂ ಹೈಕೋರ್ಟ್ ಇತ್ತೀಚೆಗೆ ತೆರೆ ಎಳೆದು ಆಯ್ಕೆ ಪ್ರಕ್ರಿಯೆಗೆ ಸೂಚನೆ ನೀಡಿದ ನಂತರ ಕುಷ್ಟಗಿ ಪಟ್ಟಣದ ಪುರಸಭೆಯ ಬಿಜೆಪಿ ಪಕ್ಷದ ಸದಸ್ಯರಾದ ಗಂಗಾಧರಸ್ವಾಮಿ ಹಿರೇಮಠ್ (ಜಿ.ಕೆ) ಅವರನ್ನ ಅಧ್ಯಕ್ಷರಾಗಿ
ಹಾಗೂ ಪಕ್ಷೇತರ ಅಭ್ಯರ್ಥಿಯಾದ
ರಾಜೇಶ್ವರಿ ಆಡೋರ್ ಅವರು ಉಪಾಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ. ಕುಷ್ಟಗಿ ಪುರಸಭೆಯ 23 ವಾರ್ಡಗಳಲ್ಲಿ ಕಾಂಗ್ರೆಸ್ ಪಕ್ಷದಿಂದ 12 ಸದಸ್ಯರು ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ
ಸ್ಪಷ್ಟ ಬಹುಮತವಿದ್ದರೂ ಅಧಿಕಾರ ರಚನೆ ಆಗದೆ ಇರೋದು ಶಾಸಕರಾಗಿರುವ ಅಮರೇಗೌಡ ಬಯ್ಯಾಪುರ ಅವರಿಗೆ ತೀವ್ರ ಮುಖಭಂಗವಾಗಿದೆ. ಕಾರಣ ತಮ್ಮ ಪಕ್ಷದ ಇಬ್ಬರು ಪುರಸಭೆಯ ಸದಸ್ಯರು ಅಡ್ಡಮತದಾನ ಮಾಡಿ ಬಿಜೆಪಿ ಪಕ್ಷ ಅಧಿಕಾರ ರಚನೆಯಾಗುವಂತೆ ನಡೆದುಕೊಂಡಿದ್ದಾರೆ. ಇದರಿಂದಾಗಿ ಬಿಜೆಪಿಯ ಎಂಟು, ಪಕ್ಷೇತರರ ಮೂರು, ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರು ಹಾಗೂ ಪುರಸಭೆ ಚುನಾಯಿತವಲ್ಲದ ಪ್ರತಿನಿಧಿಯಾದ ಸಂಸದರ ಬೆಂಬಲದಿಂದಾಗಿ ಒಟ್ಟು ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ 14 ಮತಗಳು ಬಿದ್ದರೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಚಿರಂಜೀವಿ ಹಿರೇಮಠ್ ಇವರಿಗೆ ತಮ್ಮ ಪಕ್ಷದ ಹತ್ತು ಸದಸ್ಯರು ಹಾಗೂ ಪುರಸಭೆಯ ಚುನಾಯಿತವಲ್ಲದ ಪ್ರತಿನಿಧಿಯಾದ ಶಾಸಕರ ಒಂದು ಮತದಿಂದ ಒಟ್ಟು ಹನ್ನೊಂದು ಮತಗಳನ್ನ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅಮರೇಗೌಡ ಬಯ್ಯಾಪುರ ಅವರು ಪಕ್ಷವಿರೋದಿ ಕೃತ್ಯ ಎಸಗಿದವರ ವಿರುದ್ಧ ಪಕ್ಷ ಖಂಡಿತಾ ಕ್ರಮಕೈಗೊಳ್ಳುತ್ತದೆ ಎಂದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗಂಗಾದರಸ್ವಾಮಿ ಹಿರೇಮಠ ಅವರು ಮಾತನಾಡಿ ಪಕ್ಷದ ಹಿರಿಯರಿಗೆ ಹಾಗೂ ಸದಸ್ಯರಿಗೆ ಧನ್ಯವಾದಗಳು ತಿಳಿಸಿ ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆಗಳ ಧೂಳು ನಿರ್ಮೂಲನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.
ಪಕ್ಷೇತರ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಪುರಸಭೆಯ ಸದಸ್ಯರ 25 ದಿನಗಳ ಅಜ್ಞಾತ ವಾಸವು ಕೂಡಾ ಇಂದಿಗೆ ಪೂರ್ಣಗೊಂಡಿದೆ.

Please follow and like us:
error