ಕುಷ್ಟಗಿಯಲ್ಲಿ ಮತ್ತೆ ಕೊರೋನಾ ಆರ್ಭಟ

ಕುಷ್ಟಗಿಯಲ್ಲಿ ಕೊವಿಡ್-೧೯ ಕೊರೊನಾ ವೈರಸ್ ಮತ್ತೆ ತನ್ನ ಆರ್ಭಟವನ್ನು ಸುರುಮಾಡಿದ್ದು ಇಲ್ಲಿಯವರೆಗೂ ಬರಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕೊರೊನಾ ತನ್ನ ಆರ್ಭಟವನ್ನು ಸುರುಮಾಡಿತ್ತು. ಆದರೆ ಈಗ ಸ್ಥಳೀಯ ಕುಷ್ಟಗಿ ಪಟ್ಟಕ್ಕೆ ಕಾಲಿಟ್ಟಿದೆ. ಪ್ರತಿ ದಿನ ವೈರಸ್ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಬಯ ಬೀತರಾಗಿದ್ದಾರೆ.

ಕುಷ್ಟಗಿ ಪಟ್ಟಣವು ಸೇರಿದಂತೆ ತಾಲೂಕಿನಲ್ಲಿ ಒಟ್ಟು ೭ ಪ್ರಕರಣಗಳು ದೃಢ ಪಟ್ಟಿವೇ.

ಕುಷ್ಟಗಿ ಪಟ್ಟಣ-೨ , ತವರಗೇರಾ-೧, ಅಮರಾಪೂರ-೧, ಹಿರೇತಮ್ಮಿನಾಳ-೧, ಗರ್ಜಿನಾಳ-೧, ಕಳ್ಳಮಳ್ಳಿ -೧ ಕೊರೊನಾ ವೈರಸ್ ಸೋಕು ದೃಢಪಟ್ಟಿದೆ ಎಂದು ತಾಲೂಕು ಡಿ.ಎಚ್.ಓ  ತಿಳಿಸಿದ್ದಾರೆ.

ಯಾವುದೇ ಕಾರಣಕ್ಕು ಸಾರ್ವಜನಿಕರು ಕೊವಿಡ್-೧೯ ಕೊರೊನಾ ವೈರಸ್ ಗೆ ಎದರಬೇಕಾಗಿಲ್ಲ ಪ್ರತಿಯೊಬ್ಬರು ಅನಾವಶಕವಾಗಿ ಹೊರಕಡೆ ಬರಬಾರದು ಕೊರೊನಾ ವೈರಸ್ ನಿಂದ ಜಾಗೃತರಾಗಿರಬೇಕು. ಹೊರಗಡೆ ಬಂದರೆ ಮಾಸ್ಕ್, ಸಮಾಜಿಕ ಅಂತರ ಕಾಪಾಡಬೇಕು ಮತ್ತು ಬೇರೆ ರಾಜ್ಯದಿಂದ ಹಾಗೂ ಹೊರ ಜಿಲ್ಲೆಯಿಂದ ಬಂದ ವ್ಯಕ್ತಿಗಳು ಬಂದಿದ್ದರೆ ತಕ್ಷಣ ತಹಶೀಲ್ದಾರ, ತಾಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಬೇಕು ಮತ್ತು ಸಂಭಂದ ಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಕೊರೊನಾ ಬಂದ ವ್ಯಕ್ತಿಯಿಂದ ದೂರ ಇರಬೇಕು ಎಂದು ತಿಳಿಸಿದ್ದಾರೆ.

Please follow and like us:
error