fbpx

ಕಿರು ಸಾಲ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ

Koppal ನಗರಸಭೆ ಕೊಪ್ಪಳದಿಂದ 2020-21ನೇ ಸಾಲಿನ ದೀನದಯಾಳ್ ಅಂತ್ಯೋದಯ ಯೋಜನೆ – ನಿ ಅಭಿಯಾನದಡಿ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ “ ಆತ್ಮ ನಿರ್ಭರ್ ನಿಧಿ ( ಪಿ.ಎಂ.ಎಸ್.ವಿ.ಎ ನಿಧಿ ) ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು ಯೋಜನೆಯಡಿ ನೀಡಲಾಗುವ ಕಿರು ಸಾಲ ಯೋಜನೆಗೆ ಅರ್ಹರಿಂದ ಅರ್ಜಿ ಕರೆಯಲಾಗಿದೆ . ಬೀದಿ ವ್ಯಾಪಾರಿಗಳ ಜೀವನೋಪಾಯ ಅಭಿವೃದ್ಧಿಗಾಗಿ ವ್ಯವಹಾರವನ್ನು ಪ್ರಾರಂಭಿಸಲು ಕೈಗೆಟಕುವ ದರದಲ್ಲಿ ಕಿರು ಸಾಲ ನೀಡುವುದರ ಜೊತೆಗೆ ನಿಯಮಿತ ಸಾಲ ಮರುಪಾವತಿಗೆ ಅವಕಾಶ ನೀಡಲಾಗುತ್ತದೆ . ಈಗಾಗಲೇ ನಗರಸಭೆ ಕೊಪ್ಪಳದಿಂದ ಬೀದಿ ವ್ಯಾಪಾರಿಗಳ ಸಮೀಕ್ಷೆಯಿಂದ ಕೈಬಿಟ್ಟು ಹೋಗಿರುವ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದು ನಗರಸಭೆ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡುತ್ತಿರುವ ಮತ್ತು ಹೊಸದಾಗಿ ವ್ಯಾಪಾರ ತೊಡಗಿಸಿಕೊಂಡಿರುವ ಎಲ್ಲಾ ಬೀದಿ ವ್ಯಾಪಾರಿಗಳ ನೋಂದಣಿಗಾಗಿ ಅರ್ಜಿ ಆಹ್ವಾನಿಸಲಾಗಿದೆ . ಬೀದಿ ವ್ಯಾಪಾರಿಗಳು ಅಗತ್ಯ ದಾಖಲೆಗಳೊಂದಿಗೆ ಜುಲೈ -31 , 2020 ರ ಸಲ್ಲಿಸಬಹುದು . ಹೆಚ್ಚಿನ ಮಾಹಿತಿಗಾಗಿ , ಸಂಘಟನಾಧಿಕಾರಿ , ನಗರಸಭೆ ಕೊಪ್ಪಳ ಇವರಿಗೆ ಕಛೇರಿಯ ಸಮಯದಲ್ಲಿ ಸಂಪರ್ಕಿಸಲು ನಗರಸಭೆ ಪೌರಾಯುಕ್ತರು , ತಿಳಿಸಿದ್ದಾರೆ . ಒಳಗಾಗಿ ಸಮುದಾಯ ಪೌರಾಯುಕ್ತರು , ನಗರಸಭ ಕೊಪ್ಪಳ ಕೋರಿದ್ದಾರೆ

Please follow and like us:
error
error: Content is protected !!