ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್  ನೀಡಲು ಸಚಿವ ಶಿವರಾಂ ಹೆಬ್ಬಾರ್ ಗೆ ಸಂಸದ ಮನವಿ 

ಕೋವಿಡ್ -19 ಸಂತ್ರಸ್ತ ಕಾರ್ಮಿಕರ ನೆರವಿಗೆ ಸಂಸದ ಕರಡಿ ಸಂಗಣ್ಣ ಸ್ಪಂದನೆ

ಕೊಪ್ಪಳ :ಕೋವಿಡ್-19 ಲಾಕ್ ಡೌನ್ ಸಂದರ್ಭ ದಿಂದ ಇಲ್ಲಿಯವರೆಗೂ ಸರಿಯಾದ ಉದ್ಯೋಗ ಸಿಗದೆ ಸಂಕಷ್ಟದಲ್ಲಿರುವ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪಗತಿಯಲ್ಲಿ ಬರುವ ಸಾವಿರಾರು ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರ ನೆರವಿಗೆ ಸ್ಪಂದಿಸಿರುವ ಸಂಸದ ಕರಡಿ ಸಂಗಣ್ಣ ಅವುರು ಕಾರ್ಮಿಕ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ಗಳನ್ನು ನೀಡುವುಂತೆ ಕಾರ್ಮಿಕ ಹಾಗೂ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರದಿಂದ ಸಿಗುವ ಸೌಲಭ್ಯಗಳೊಂದಿಗೆ ಇತರ ದಾನಿಗಳ ನೆರವಿನೊಂದಿಗೆ ಕೃಷಿ ಕೂಲಿಕಾರರು, ಕಾರ್ಮಿಕರು, ಬಡವರಿಗೆ ದಿನಸಿ ಕಿಟ್ ಗಳು ಸೇರಿದಂತೆ ಇತರೆ ಸಹಾಯಹಸ್ತ ನೀಡಿರುವ ಸಂಸದರು ಕಾರ್ಮಿಕ ಇಲಾಖೆಯಿಂದ ಲೋಕಸಭಾ ಕ್ಷೇತ್ರದಲ್ಲಿರುವ ಸುಮಾರು  25 ಸಾವಿರ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರುಗಳಿಗೆ ಕೋವಿಡ್-19 ಪೂರ್ವದಲ್ಲಿದ್ದಂತೆ ಪ್ರತಿನಿತ್ಯ ಉದ್ಯೋಗ ಸಿಗದೆ ಜೀವನ ನಿರ್ವಹಣೆ  ಮಾಡಲು ಕಷ್ಟಸಾಧ್ಯವಾಗಿರುವದರಿಂದ ಆಹಾರ ಧ್ಯಾನ್ಯ ಸಾಮಾಗ್ರಿ ದಿನಸಿ ಕಿಟ್ ಗಳನ್ನು ಇಲಾಖೆಯಿಂದ ನೀಡಲು ಕೋರಿದ್ದಾರೆ.
ಕೊಪ್ಪಳ ಜಿಲ್ಲೆ ಸೇರಿ, ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದುಡಿಯುವ ಜನರು ಇಂದಿಗೂ ಸಂಕಷ್ಟದಲ್ಲಿದ್ದು, ಉದ್ಯೋಗ ಸೇರಿದಂತೆ ಇತರೆ ಸೌಲಭ್ಯಗಳು ಕೋವಿಡ್-19 ಕಾರಣಗಳಿಂದ ಸಿಗುತ್ತಿಲ್ಲ, ಇಂತಹ ಜನರಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಈಗಾಗಲೇ ಹಲವು ನೆರವಿನ ಯೋಜನೆಗಳನ್ನು ಜಾರಿಗೆ ತಂದಿವೆ, ಆದರೂ ಹಿಂದುಳಿದ ಪ್ರದೇಶವಾಗಿರುವ ಇಲ್ಲಿಯ 25 ಸಾವಿರ ಕಾರ್ಮಿಕರು, ಬಡವರು ಇತರೆ ವರ್ಗದ ಜನರು ಇನ್ನೂ ಸಂಕಷ್ಟದಲ್ಲಿರುವ ಕಾರಣಗಳಿಗಾಗಿ ಅವುರುಗಳಿಗೆ ಆಹಾರ ಕಿಟ್ ನೀಡಲು ಕಾರ್ಮಿಕ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.-

ಜಿಲ್ಲೆಗೆ ಭೇಟಿ ನೀಡಿದ್ದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರಿಗೆ ಜಿಲ್ಲೆಯ ಹಾಗೂ ಲೋಕ ಸಭಾ ಕ್ಷೇತ್ರದಲ್ಲಿನ ಕಾರ್ಮಿಕರು, ಅಸಂಘಟಿತ ವರ್ಗದ ಜನರ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರಲಾಗಿದ್ದು, ಪ್ರಸ್ತುತ ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ಇಲಾಖೆಯಿಂದ ಆಹಾರ ಸಾಮಾಗ್ರಿ ಕಿಟ್ ನೀಡಲು ಮಾಡಿಕೊಂಡ ಮನವಿಗೆ ಸಚಿವರು ಸ್ಪಂದಿಸಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ : ಕರಡಿ ಸಂಗಣ್ಣ, ಸಂಸದರು ಕೊಪ್ಪಳ.

Please follow and like us:
error