ಕಾರಟಗಿ ಕೊಲೆ ಪ್ರಕರಣ,೫೦ ಸಾವಿರಕ್ಕೆ ಸುಪಾರಿ: ಇಬ್ಬರ ಬಂಧನ, ಇಬ್ಬರು ಪರಾರಿ

ಕೊಪ್ಪಳ : ಪ್ರೀತಿಸಿ ಅಂತರ್ಜಾತಿ ಮದುವೆಯಾಗಿದ್ದ ಗಂಡ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹೆಂಡತಿಯನ್ನು ಕೊಂದು ಹಾಕಿದ್ದ ದುಷ್ಕರ್ಮಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಟಿ. ಶ್ರೀಧರ ಅಂತರ್ಜಾತಿ ವಿವಾಹವೇ ಕೊಲೆಗೆ ಕಾರಣವಾಗಿದ್ದ ಸ್ವತಃ ತಮ್ಮನೇ ಸುಫಾರಿ ನೀಡಿ ಕೊಲೆ ಮಾಡಿಸಿದ್ದಾನೆ. ಕೊಲೆ ಮಾಡಲು ಕೊಲೆಗಾರರು ೫೦ ಸಾವಿರ ರೂಪಾಯಿಗೆ ಸುಪಾರಿ ಪಡೆದಿದ್ದರು. ಸುಪಾರಿ ಕೊಲೆಗಾರರು ಪರಾರಿಯಾಗಿದ್ದು ೨ ತಂಡಗಳ ಮೂಲಕ ಹುಡುಕಾಟ ನಡೆದಿದೆ . ಗಂಡ ವಿನೋದನ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿಎಸ್ಪಿ ರುದ್ರೇಶ ಉಜ್ಜನಿಕೊಪ್ಪ, ಡಿಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ರವಿ ಉಕ್ಕುಂದ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು

ಪೋಲಿಸ ಇಲಾಖೆಯ ಪತ್ರಿಕಾ ಪ್ರಕಟಣೆ

ದಿನಾಂಕ : 17-10-2020 ರಂದು ಸಾಯಂಕಾಲ ಕಾರಟಗಿಯ ಚನ್ನಬಸವೇಶ್ವರ ನಗರದಲ್ಲಿ ಶ್ರೀಮತಿ ತ್ರಿವೇಣಿ ಗಂ . ವಿನೋದ ವಯಾ : 34 ವರ್ಷ ಉದ್ಯೋಗ : ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಹಾಗೂ ಇವರ ಗಂಡ ವಿನೋದ ತಂ . ವೆಂಕಣ್ಣ ವಯಾ : 31 ವರ್ಷ , ಉದ್ಯೋಗ , ಐ.ಡಿ.ಎಫ್.ಸಿ ಬ್ಯಾಂಕ್‌ನಲ್ಲಿ ಕೆಲಸ ಇವರುಗಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಮಾರಕಾಯುಧಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಶ್ರೀಮತಿ ತ್ರಿವೇಣಿ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ . ಶ ವಿನೋದ ರವರಿಗೆ ಗಂಭೀರ ಗಾಯಗಳಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಈ ಘಟನೆ ಹಿನ್ನೆಲೆಯಲ್ಲಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದೆ . ಸದರ ಪ್ರಕರಣದ ತನಿಖೆಯನ್ನು ಶ್ರೀ ಆರ್.ಎಸ್ ಉಜ್ಜನಕೊಪ್ಪ , ಡಿ.ಎಸ್.ಪಿ ಗಂಗಾವತಿ ರವರ ನೇತೃತ್ವದಲ್ಲಿ ಶ್ರೀ ಉದಯರವಿ ಸಿ.ಪಿ.ಐ ಗಂಗಾವತಿ ಗ್ರಾಮೀಣ ವೃತ್ತ , ಶ್ರೀ ಅವಿನಾಶ್ , ಪಿ.ಎಸ್.ಐ ಕಾರಟಗಿ , ಶ್ರೀ ಪ್ರಶಾಂತ ಪಿ.ಎಸ್.ಐ ಕನಕಗಿರಿ ಮತ್ತು ಪೊಲೀಸ್ ಸಿಬ್ಬಂದಿಯವರನ್ನೊಳಗೊಂಡ 2 ವಿಶೇಷ ತಂಡಗಳನ್ನು ರಚಿಸಿ , ವೈಜ್ಞಾನಿಕ ರೀತಿಯಲ್ಲಿ ತನಿಖೆ ಕೈಗೊಂಡು , ಸೂಕ್ತ ಸಾಕ್ಷಾಧಾರಗಳೊಂದಿಗೆ ಆರೋಪಿತರಾದ 1 ) ಅವಿನಾಶ ತಂ , ಶಿವಾಜಿರಾವ್ ಚಂದನಶಿವ , 2 ) ಯುವರಾಜ್ ತಂ . ಸದಾಶಿವ ನಿಂಬಾಳ್ಳರ್ ಸಾ : ಮುಧೋಳ ರವರನ್ನು ದಸ್ತಗಿರಿ ಮಾಡಿದ್ದು ಇರುತ್ತದೆ . ಪ್ರಕರಣದಲ್ಲಿನ ತಲೆಮರೆಸಿಕೊಂಡ ಇತರ ಆರೋಪಿತರ ಪತ್ತೆ ಕಾರ್ಯ ಮುಂದುವರೆದಿದೆ , ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸಿ ಅಲ್ಪಾವಧಿಯಲ್ಲೇ ಆರೋಪಿತರ ಗುರುತು ಪತ್ತೆ ಹಚ್ಚಿದ ಗಂಗಾವತಿ ಡಿ.ವೈ.ಎಸ್.ಪಿ ಶ್ರೀ ಆರ್.ಎಸ್ ಉಜ್ಜನಕೊಪ್ಪ , ಗಂಗಾವತಿ ಗ್ರಾಮಾಂತರ ಸಿ.ಪಿ.ಐ ಶ್ರೀ ಉದಯರವಿ , ಪಿ.ಎಸ್.ಐ ಕಾರಟಗಿ ಶ್ರೀ ಅವಿನಾಶ್ , ಪಿ.ಎಸ್.ಐ ಕನಕಗಿರಿ ಶ್ರೀ ಪ್ರಶಾಂತ ಹಾಗೂ ಸಿಬ್ಬಂದಿಯವರಾದ ಕಾರಟಗಿ ಠಾಣೆ ಭೀಮಣ್ಣ , ಮಾರುತಿ , ಅಮರಪ್ಪ , ಮಂಜುಸಿಂಗ್ , ಶರಣಪ್ಪ , ಶಿವರಾಜ ಪ್ರಸನ್ನಕುಮಾರ , ಬಸವರಾಜ , ನಾಗರಾಜ , ಕನಕಗಿರಿ ಠಾಣೆ ಸಿಬ್ಬಂದಿಯವರಾದ ಶೇಖರ್ , ಕೊಟ್ರೇಶ್ , ಬೈಲಪ್ಪ , ಅರ್ಜುನ್ ರವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು , ಕೊಪ್ಪಳ ರವರು ಶ್ಲಾಘಿಸಿ ಬಹುಮಾನ ಘೋಷಿಸಿ ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ .

Please follow and like us:
error