ಕಾಂಗ್ರೆಸ್ ಮುಖಂಡನ ಜೀವ ಬಲಿ ಪಡೆದ ಜಿ‌ಪಂ. ಕ್ಷೇತ್ರದ ಹೆಸರು ಬದಲಾವಣೆ

ಗಂಗಾವತಿ : ಜಿಲ್ಲಾ ಪಂಚಾಯತ ಕ್ಷೇತ್ರಗಳ ಮರು ವಿಂಗಡನೆ ಮತ್ತು ರಚನೆ ಕಾಂಗ್ರೆಸ್ ಮುಖಂಡನ ಜೀವವನ್ನೇ ಬಲಿ ತೆಗೆದುಕೊಂಡಿದೆ. ಮೊನ್ನೆಯಷ್ಟೇ ಅಧಿಕೃತವಾಗಿ ಕ್ಷೇತ್ರಗಳ ವ್ಯಾಪ್ತಿ ಮತ್ತು ಹೆಸರುಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಇದಕ್ಕೆ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಅದೇ ರೀತಿ ಆನೆಗೊಂದಿ ಕ್ಷೇತ್ರದ ಹೆಸರು ಬದಲಾಯಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪಕ್ಷಾತೀತವಾಗಿ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಇದನ್ನು ವಿರೋಧಿಸುವ ಕುರಿತು ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ತಾಲೂಕ ಪಂಚಾಯತ್ ಸದಸ್ಯ ಕಾಂಗ್ರೆಸ್ ಹಿರಿಯ ಮುಖಂಡ ಪ್ರವೀಣಕುಮಾರ ಸ್ಥಳದಲ್ಲಿ ಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಲಾಯಿತಾದರೂ ಮಾರ್ಗಮದ್ಯೆಯೇ ಸಾವನ್ನಪ್ಪಿದ್ದಾರೆ.

ಗಂಗಾವತಿ ತಾಲೂಕಿನ ಆನೆಗೊಂದಿ ಗ್ರಾಮದ ಶ್ರೀ ರಂಗನಾಥ ದೇವಸ್ಥಾನದ ಅವರಣದಲ್ಲಿ ಜಿಲ್ಲಾ ಪಂಚಾಯತಿ ಕ್ಷೇತ್ರ ಮರುವಿಂಗಡಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28-ಚಿಕ್ಕಜಂತಕಲ್ ಕ್ಷೇತ್ರ (ಆನೆಗೊಂದಿ)ಎಂದು ಮರುನಾಮಕರಣ ಮಾಡಿದ್ದು ಇದು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ ಇತಿಹಾಸಕ್ಕೆ ಹಾಗೂ ಈ ಭಾಗದ ಜನತೆಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತವಾಗಿತ್ತು

ಈ ಸಂಬಂಧ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರ ನಡೆಯನ್ನು ಖಂಡಿಸಿ ಹೋರಾಟದ ರೂಪುರೇಷೆಗಳನ್ನು ಸಿದ್ದಪಡಿಸುವನಿಟ್ಟಿನಲ್ಲಿ ನಿನ್ನೆ ಸಂಜೆ ಸುಮಾರು 4 ಗಂಟೆಗೆ ಆನೆಗುಂದಿ, ಮಲ್ಲಾಪುರ, ಸಣಾಪುರ ಮತ್ತು ಸಂಗಾಪುರ ಪಂಚಾಯ್ತಿಗಳ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು ಹಾಗೂ ಗ್ರಾಮಗಳ ಹಿರಿಯರು ಮತ್ತು ಯುವಕರ ಸಭೆ ಕರೆಯಲಾಗಿತ್ತು ಎಲ್ಲರೂ ಸಭೆಗೆ ಆಗಮಿಸಿ ಸರಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯತನದ ನಡೆಯ ವಿರುದ್ಧ ಪಕ್ಷತೀತವಾಗಿ ಶಾಸಕರ ಮತ್ತು ಜಿಲ್ಲಾಡಳಿತದ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು ಮತ್ತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದರು ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯರು ಆದಂತಹ ಪ್ರವೀಣ ಕುಮಾರ್ ಮಾಜಿ ತಾಲೂಕಾ ಪಂಚಾಯತ್ ಸದಸ್ಯರು ಸಭೆಯ ನಡುವೆ ಪ್ರಜ್ಞೆ ತಪ್ಪಿದರು ಅವರನ್ನು ಆಸ್ಪತ್ರೆಗೆ ಸಾಗಿಸುತಿದ್ದಾಗ ಕೊನೆಯುಸಿರೆಳೆದರು ಸರಕಾರದ ಈ ನಡೆಗೆ ಒಂದು ಜೀವ ಬಲಿಯಾಯಿತು .

ಇದು ಸಾರ್ವಜನಿಕರ ತೀವ್ರ‌ಆಕ್ರೋಶಕ್ಕೆ ಕಾರಣವಾಗಿದೆ.

Please follow and like us:
error