ಕಾಂಗ್ರೆಸ್ ಪಕ್ಷದಿಂದ ಸದ್ಭಾವನಾ ನಡಿಗೆ

ಗಾಂಧಿಯವರ ೧೫೦ ನೇ ಜಯಂತಿ ನಿಮಿತ್ಯ.
ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ  ಕಾಂಗ್ರೆಸ್ ಪಕ್ಷದಿಂದ ಸದ್ಭಾವನ ನಡಿಗೆ  ಹಮ್ಮಿಕೊಳ್ಳಲಾಗಿದ್ದು ಕನಕಗಿರಿ ಕ್ಷೇತ್ರದ  ಮುಸಲಾಪುರದಿಂದ  ಕನಕಗಿರಿಯ ವರೆಗೆ ಪಾದಯಾತ್ರೆ ನಡೆಯಿತು. ಕಾಂಗ್ರೆಸ್ ಪಕ್ಷ. ಸುಮಾರು ೧೨ ಕಿ.ಮೀ ಪಾದಯಾತ್ರೆ.

 ಕನಕಗಿರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾದಯಾತ್ರೆ ಮಹಾತ್ಮ ಗಾಂಧಿಯವರ ೧೫೦ ನೇ ಜಯಂತಿ ಅಂಗವಾಗಿ ನಡೆಯುತ್ತಿರುವ ಪಾದಯಾತ್ರೆ. ಮಾಜಿ ಸಚಿವ ಡಿಸಿಸಿ ಅದ್ಯಕ್ಷ   ಶಿವರಾಜ ತಂಗಡಗಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಜಿ.ಪಂ ಅದ್ಯಕ್ಷ ವಿಶ್ವನಾಥ ರೆಡ್ಡಿ, ಮಾಜಿ ಜಿ.ಪಂ ಅದ್ಯಕ್ಷ ರಾಜಶೇಖರ ಹಿಟ್ನಾಳ, ಜಿ.ಪಂ.‌ಸದಸ್ಯರಾದ ಅಮರೇಶ ಗೋನಾಳ, ಗೂಳಪ್ಪ ಹಲಗೇರಿ, ರಮೇಶ ನಾಯಕ, ಸಿದ್ದಪ್ಪ ನಿರಲೂಟಿ, ಶ್ರೀನಿವಾಸ ರೆಡ್ಡಿ . ಶರಣಬಸವರಾಜ್ , ಪ್ರಭು ಉಪನಾಳ ಸೇರಿದಂತೆ ಇತರ ನಾಯಕರು ನೂರಾರು ಕಾರ್ಯಕರ್ತರು ಭಾಗಿಯಾಗಿದ್ದಾರೆ.

Please follow and like us:
error