ರಾಯಚೂರು : ಕಾಂಗ್ರೆಸ್ ನವರು ಸರ್ಕಾರ ಬೀಳುತ್ತೇ ಬೀಳುತ್ತೇ ಅನ್ನೋ ಆಸೆಯಲ್ಲಿದ್ದಾರೆ. ಅವರ ಸರ್ಕಾರವನ್ನ ನಾವೇನು ಬೀಳಿಸಿಲ್ಲ.. ಅವರಿಗೆ ಕೆಲಸವಿಲ್ಲದ್ದಕ್ಕೆ ಅವರ ನಾಯಕರು ಸರ್ಕಾರ ಬೀಳುತ್ತೆ ಅಂತಿದ್ದಾರೆ. ಪಕ್ಷ ವಹಿಸಿದ ಜವಾಬ್ದಾರಿಯನ್ನ ನಾವು
ನಿರ್ವಹಿಸುತ್ತೇವೆ.. ನಮಗೆ ಯಾವ ಸ್ಥಾನ ಕೊಡಬೇಕು ಅನ್ನೋದು ಪಕ್ಷಕ್ಕೆ ಬಿಟ್ಟದ್ದು ಎಂದು ಆರೋಗ್ಯ ಸಚಿವ ಶ್ರೀರಾಮುಲು ರಾಯಚೂರಿನಲ್ಲಿ ಹೇಳಿದರು . ರಿಮ್ಸ್ ಆಸ್ಪತ್ರೆ ವಿಕ್ಷಣೆ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು
ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ನೀಗಿಸುವ ಕೆಲಸ ಮಾಡಬೇಕಿದೆ. ಎಂಬಿಬಿಎಸ್ ವೈದ್ಯರನ್ನ ನೇರವಾಗಿ ನೇಮಕ ಮಾಡಿಕೊಳ್ಳಲು ಸೂಚಿಸಿದ್ದೇನೆ. ದಂತ ವೈದ್ಯರ ನೇರ ನೇಮಕಾತಿಯನ್ನ ನಡೆಸಲು ಕ್ರಮ. ರಾಜ್ಯದಲ್ಲಿ 1700 ಜನ ಮಾತ್ರ ಸರ್ಕಾರಿ ವೈದ್ಯರು ಇದ್ದಾರೆ. ಆಸ್ಪತ್ರೆಗಳಲ್ಲಿ ಬಡವರಿಗೆ ಮೂಲಭೂತ ಸೌಲಭ್ಯಗಳು ಸಿಗಬೇಕು. ಅದನ್ನ ಅರ್ಥಮಾಡಿಕೊಳ್ಳಲು ವಾಸ್ತವ್ಯ ಮಾಡುತ್ತಿದ್ದೇನೆ. ರಾಯಚೂರಿನಿಂದ ಬಳ್ಳಾರಿ ಹಾಗೂ ಬೇರೆಡೆ ರೋಗಿಗಳನ್ನ ಕಳುಹಿಸುವುದಿದೆ.. ಇದರ ಕುರಿತು ಚರ್ಚೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ ಸೇರಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ… ಹಾವು ,ಚೇಳು ಕಡಿತಕ್ಕೆ ರಾಜ್ಯದಲ್ಲಿ ಔಷಧಿ ಕೊರತೆಯಿದೆ. ಒಂದೆರಡು ದಿನಗಳಲ್ಲಿ ಔಷಧಿ ಸಿಗುವಹಾಗೇ ಕ್ರಮ ತೆಗೆದುಕೊಳ್ಳುತ್ತೇನೆ.. ಎಂದಯ ಹೇಳಿದ ಸಚಿವ ಶ್ರೀರಾಮಲು ಇಂದು ರಾತ್ರಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
…